ಅಂತಾರಾಷ್ಟ್ರೀಯ

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತ ಸಹಾಯ ಮಾಡುವತ್ತ ಗಮನ ಕೊಡುತ್ತಿದೆ : ಸಚಿವ ಎಸ್. ಜೈಶಂಕರ್

Share news

ಶ್ರೀಲಂಕಾದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದು ಭಾರತ ಸಹಾಯ ಮಾಡುತ್ತಲೇ ಬಂದಿದೆ.ಕಳೆದ ಹಲವಾರು ತಿಂಗಳಿನಿಂದ ಬೇಕಾದ ಅಗತ್ಯ ಸರಕುಗಳನ್ನು ನೀಡಿದ್ದು, ಲೈನ್ ಆಫ್ ಕ್ರೆಡಿಟ್ ಮೂಲಕ $ 3.8 ಶತಕೋಟಿ ಸಹಾಯವನ್ನು ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ಶ್ರೀಲಂಕಾದ ಆರ್ಥಿಕ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನೆರೆಹೊರೆಯ ರಾಷ್ಟ್ರಗಳ ಅವಶ್ಯಕತೆಗಳನ್ನು ಪೂರೈಸಲು ಭಾರತ ಸದಾ ಶ್ರಮಿಸುತ್ತಿದೆ. ಇದಲ್ಲದೇ ಭಾರತ ಮೊದಲಿನಿಂದಲೂ ಸದಾ ಶ್ರೀಲಂಕಾಕ್ಕೆ ಸಹಾಯ ಮಾಡುತ್ತಲೇ ಬಂದಿದೆ. ಎಲ್ಲೆಡೆ ಹರಿದಾಡುತ್ತಿದ್ದ ಭಾರತ ತನ್ನ ಸೇನೆಯನ್ನು ಶ್ರೀಲಂಕಾಕ್ಕೆ ಕಳುಹಿಸಿದೆ ಎಂಬ ಮಾಹಿತಿಯನ್ನು ಅಸತ್ಯವೆಂದು ಸ್ಪಷ್ಟಪಡಿಸಿದ್ದಾರೆ. ಮತ್ತು ಮುಂದೆಯು ಎಲ್ಲಾ ಅವಶ್ಯಕತೆಗಳನ್ನು ಹೀಗೆ ಪೂರೈಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button