ಅಂತಾರಾಷ್ಟ್ರೀಯ

ʻನ್ಯಾಷನಲ್‌ ಜಿಯೋಗ್ರಾಫಿಕ್‌ʼನ ʻವರ್ಷದ ಚಿತ್ರʼ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯ ಛಾಯಾಚಿತ್ರಗ್ರಾಹಕ ಕಾರ್ತಿಕ್‌ ಸುಬ್ರಮಣ್ಯಂ

Share news

ಭಾರತೀಯ ಮೂಲದ ಅಮೇರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಸಾಫ್ಟ್‌ವೇರ್‌ ಇಂಜಿನೀಯರ್‌ ಕಾರ್ತಿಕ್‌ ಸುಬ್ರಮಣ್ಯಂ ಅವರು ಕ್ಲಿಕ್ಕಿಸಿದ ʻಡ್ಯಾನ್ಸ್‌ ಆಫ್‌ ದಿ ಈಗಲ್‌ʼ ಹೆಸರಿನ ಛಾಯಾಚಿತ್ರಕ್ಕೆ ʻನ್ಯಾಷನಲ್‌ ಜಿಯೋಗ್ರಾಫಿಕ್‌ʼ ಕೊಡಮಾಡುವ ಪ್ರತಿಷ್ಠಿತ ʻವರ್ಷದ ಚಿತ್ರʼ ಪ್ರಶಸ್ತಿ ಲಭಿಸಿದೆ.

ಅಮೇರಿಕದಲ್ಲಿನ ಅಲಾಸ್ಕಾದಲಿರುವ ವಿಶಿಷ್ಟವಾದ ಬಿಳಿತಲೆಯ ಹದ್ದುಗಳಿಂದ ಕೂಡಿರುವ ʻಚಿಲ್ಕಟ್‌ ಬಾಲ್ಡ್‌ ಈಗಲ್‌’ ಪಕ್ಷಿಯ ಹಾರುವ ದೃಶ್ಯವನ್ನು ಸಂರಕ್ಷಣಾ ವಲಯದಲ್ಲಿ ಕ್ಲಿಕ್ಕಿಸಲಾಗಿದೆ. ʻಹದ್ದುಗಳ ಚಟುವಟಿಕೆ ಮತ್ತು ನಡವಳಿಕೆಯನ್ನು ಗಂಟೆಗಟ್ಟಲೆ ಗಮನಿಸಿದ ನನಗೆ ಅವುಗಳ ಅಪೂರ್ವ ಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಯಿತುʼ ಎಂದು ಕಾರ್ತಿಕ್‌ ಸುಬ್ರಮಣ್ಯಂ ಹೇಳಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button