ಅಂತಾರಾಷ್ಟ್ರೀಯ

7 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿದ ಸ್ಕಾಟ್ಲೆಂಡ್ ಮ್ಯೂಸಿಯಂ

Share news

ಭಾರತ ಹಿಂದೂ ದೇವಾಲಯಗಳಿಂದ 19ನೇ ಶತಮಾನದಲ್ಲಿ ಕಳುವಾಗಿದ್ದ ಏಳು ಪ್ರಾಚೀನ ಕಲಾಕೃತಿಗಳನ್ನು ಗ್ಲಾಸ್ಗೋದ ವಸ್ತುಸಂಗ್ರಹಾಲಯ ಭಾರತಕ್ಕೆ ಮರಳಿ ನೀಡಲಾಗಿದೆ. ದೇವಾಲಯಗಳ ಕಲಾಕೃತಿಗಳು ಕಾಣಯಾಗಿದ್ದು, ಪುನಃ ಸ್ಕಾಟ್ಲೆಂಡ್ ಸರ್ಕಾರ ಮರಳಿಸಲಾಗಿದೆ.

ಇಂಗ್ಲೆಂಡ್ ನ ಭಾರತೀಯ ಹೈಕಮಿಷನರ್ ಉಪಸ್ಥಿತಿಯಲ್ಲಿ ಭಾರತ ಹಾಗೂ ಸ್ಕಾಟ್ಲೆಂಡ್ ಸರ್ಕಾರದ ನಡುವಿನ ಒಪ್ಪಂದದ ಪ್ರಕಾರ ಕೆಲ್ವಿಂಗ್ರೋವ್ ಆರ್ಟ್ಸ್ ಗ್ಯಾಲರಿ ಯಿಂದ 14 ನೇ ಶತಮಾನಕ್ಕೆ ಸೇರಿದ ಉತ್ತರ ಪ್ರದೇಶದ ಹಿಂದೂ ದೇವಾಲಯದಿಂದ ಕದ್ದ ಕಲ್ಲಿನ ಬಾಗಿಲಿನ ಜಾಂಬ್ ಸೇರಿದಂತೆ ಏಳು ಕಲಾಕೃತಿಗಳನ್ನು ಸ್ಕಾಟ್ಲೆಂಡ್ ನ ಗ್ಲಾಸ್ಗೋದ ವಸ್ತುಸಂಗ್ರಹಾಲಯವು ಹಿಂದಿರುಗಿಸುವ ಭಾಗವಾಗಿ ಭಾರತಕ್ಕೆ ಮರಳಿ ವರ್ಗಾಯಿಸಿವೆ.

ಸ್ಕಾಟ್ಲೆಂಡ್ ನಗರದ ವಸ್ತುಸಂಗ್ರಹಾಲಯಗಳನ್ನು ನಡೆಸುತ್ತಿರುವ ದತ್ತಿ ಸಂಸ್ಥೆಯಾದ ಗ್ಲ್ಯಾಸ್ಗೋ ಲೈಫ್ ಈ ವರ್ಷದ ಆರಂಭದಲ್ಲಿ ಭಾದತದ ಕಲಾಕೃತಿಗಳ ಹಸ್ತಾಂತರವನ್ನು ದೃಢಪಡಿಸಿತ್ತು ಮತ್ತು ಕೆಲ್ವಿಂಗ್ರೋವ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂನಲ್ಲಿ ಯುಕೆಯಲ್ಲಿನ ಭಾರತೀಯ ಹೈಕಮಿಷನರ್ ಅವರ ಉಪಸ್ಥಿತಿಯಲ್ಲಿ ಮಾಲೀಕತ್ವದ ವರ್ಗಾವಣೆ ಸಮಾರಂಭದಲ್ಲಿ ವ್ಯವಸ್ಥೆಯನ್ನು ಔಪಚಾರಿಕಗೊಳಿಸಲಾಯಿತು.

19 ನೇ ಶತಮಾನದಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿನ ದೇವಾಲಯಗಳಿಂದ ಹೆಚ್ಚಿನ ವಸ್ತುಗಳನ್ನು ತೆಗೆದುಹಾಕಲಾಯಿತು. ಗ್ಲ್ಯಾಸ್ಗೋ ಲೈಫ್ ಪ್ರಕಾರ, ಎಲ್ಲಾ ಏಳು ಕಲಾಕೃತಿಗಳನ್ನು ಗ್ಲ್ಯಾಸ್ಗೋ ಸಂಗ್ರಹಗಳಿಗೆ ಉಡುಗೊರೆಯಾಗಿ ನೀಡಲಾಗಿತ್ತು .

“ಭಾರತೀಯ ಪುರಾತನ ವಸ್ತುಗಳ ಮಾಲೀಕತ್ವದ ವರ್ಗಾವಣೆಯು ಗ್ಲ್ಯಾಸ್ಗೋಗೆ ಮಹತ್ವದ ಹೆಜ್ಜೆಯನ್ನು ಸಂಕೇತಿಸುತ್ತದೆ, ಈ ಸಾಂಸ್ಕೃತಿಕ ಕಲಾಕೃತಿಗಳನ್ನು ತಮ್ಮ ಕಾನೂನುಬದ್ಧ ಮಾಲೀಕರ ಕೈಗೆ ಹಿಂತಿರುಗಿಸುವ ಮೂಲಕ ನಗರವು ತನ್ನ ಸಕಾರಾತ್ಮಕ ವಾಪಸಾತಿ ಇತಿಹಾಸವನ್ನು ಮುಂದುವರೆಸಿದೆ” ಎಂದು ವಸ್ತುಸಂಗ್ರಹಾಲಯಗಳು ಮತ್ತು ಸಂಗ್ರಹಗಳ ಮುಖ್ಯಸ್ಥ ಡಂಕನ್ ಡೋರ್ನಾನ್ ಹೇಳಿದರು.

ಭಾರತಕ್ಕೆ ಕಲಾಕೃತಿಯನ್ನು ಮರಳಿ ತರುವ ಮೂಲಕ ಭಾರತದ ವೈಭವ ಶಿಲ್ಪ ಕಲೆಗಳ ಶ್ರೀಮಂತಿಕೆಯನ್ನು ಪರಿಚಯಿಸಿ ಸ್ಕಾಟ್ಲೆಂಡ್ ಗ್ಲಾಸ್ಗೋ ಸಂಗ್ರಹಾಲಯವು ತನ್ನ ಬದ್ಧತೆಯೊಂದಿಗೆ ಭಾರತದ ಸಾಂಸ್ಕೃತಿಕ ಸಂಕೇತಗಳನ್ನು ಮತ್ತೆ ಮರಳಿಸಿದೆ.


Share news

Related Articles

Leave a Reply

Your email address will not be published. Required fields are marked *

Back to top button