ಅಂತಾರಾಷ್ಟ್ರೀಯ

ಆರ್ಥಿಕ ಸ್ಥಿತಿಯಲ್ಲಿ ಬದಲಾಗದ ಶ್ರೀಲಂಕಾ, ಪ್ರಧಾನಿ ರಾನಿಲ್ ಸಿಂಘೆ ರಾಜೀನಾಮೆ

Share news

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿನ ಸರ್ಕಾರ ದುಸ್ಥಿತಿಗೆ ತಲುಪಿದೆ. ಆರ್ಥಿಕ ಪರಿಸ್ಥಿತಿಯ ಏರುಪೇರುಗಳಿಂದ ಶ್ರೀಲಂಕಾದಲ್ಲಿ ಕೆಲವು ದಿನಗಳಿಂದ ಸರ್ಕಾರದ ವಿರುದ್ಧವೇ ಪ್ರತಿಭಟನೆಗಳನ್ನು ಮಾಡಲಾಗಿತ್ತಿದೆ ಇದರ ನಡುವೆ ಶ್ರೀಲಂಕಾ ಪ್ರಧಾನಿ ರಾನಿಲ್ ಸಿಂಘೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

“ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಸರ್ಕಾರದ ಮುಂದುವರಿಕೆಗಾಗಿ, ಸರ್ವಪಕ್ಷ ಸರ್ಕಾರದ ರಚನೆಗೆ ದಾರಿ ಮಾಡಿಕೊಡುವ ಸಲುವಾಗಿ ಪಕ್ಷದ ಶಿಫಾರಸುಗಳನ್ನು ಒಪ್ಪಿಕೊಂಡಿದ್ದೇನೆ. ಇದಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾನಿಲ್ ವಿಕ್ರಮ್ ಸಿಂಘೆ ಹೇಳಿದ್ದಾರೆ.

ರಾಜೀನಾಮೆಯ ಹಿನ್ನೆಲೆಯಲ್ಲಿ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ ಅವರು ” ಹಾಲಿ ಸರ್ಕಾರ ಅಧಿಕಾರದಿಂದ ಇಳಿಯುವ ಮುನ್ನ ಹೊಸ ಸರ್ಕಾರ ರಚನೆಯಾಗಬೇಕಿದೆ. ಸರ್ವಪಕ್ಷಗಳ ಸರ್ಕಾರ ರಚನೆಯಗೆ ಅಗತ್ಯವಾಗಿದೆ ” ಎಂಬ ಸಂದೇಶವನ್ನು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರಿಗೆ ಕಳುಹಿಸಿದರು. ಮೊದಲು ಪ್ರತಿಭಟನಾಕಾರರನ್ನು ಎದುರಿಸಲು ರಾನಿಲ್ ವಿಕ್ರಮ್ ಸಿಂಘೆ ಅವರ ಮನೆಯ ಸುತ್ತಲೂ ಪೋಲೀಸರು ಮತ್ತು ಸೇನೆಯೊಂದಿಗೆ ಭದ್ರತೆ ಮಾಡಲಾಗಿತ್ತು.

ಅಧ್ಯಕ್ಷ ಗೊಟಬಯ ಅವರು ರಾಜೀನಾಮೆ ನೀಡುವಂತೆ ಸರ್ವಪಕ್ಷ ಸಭೆಯಲ್ಲಿ ಒತ್ತಾಯಿಸಲಾಗಿತ್ತು. ಗೊಟಬಯ ಅವರ ಮನೆಗೆ ಪ್ರತಿಭಟನಕಾರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ಪರಾರಿಯಾಗಿದ್ದು ಇಲ್ಲಿಯವರೆಗೂ ಎಲ್ಲಿದ್ದಾರೆಂಬ ಮಾಹಿತಿ ತಿಳಿದು ಬಂದಿಲ್ಲ.

ಆರ್ಥಿಕ ಸಮಸ್ಯೆಗಳ ವಿರುದ್ಧವಾಗಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ನಡೆದು ಒತ್ತಡದಿಂದ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸ ಅವರು ಮೇ ತಿಂಗಳಲ್ಲಿ ರಾಜೀನಾಮೆ ನೀಡಿದರು. ನಂತರ ಅವರ ಸ್ಥಾನಕ್ಕೆ ಪ್ರಧಾನಿ ರಾಹಿಲ್ ವಿಕ್ರಮ್ ಸಿಂಘೆ ಆಯ್ಕೆಗೊಂಡು ಪುನಃ ಮೇ 12 ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರೂ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಮೊದಲಿನಂತೆ ಇದೆ ಯಾವುದೇ ಬದಲಾವಣೆ ಕಾಣಲಿಲ್ಲ.


Share news

Related Articles

Leave a Reply

Your email address will not be published. Required fields are marked *

Back to top button