Jobs

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ದೆಹಲಿ ಪೊಲೀಸ್‌ ಪಡೆಗಳ 1,876 ಸಬ್ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ…

Share news

ಸಿಬ್ಬಂದಿ ನೇಮಕಾತಿ ಆಯೋಗವು ಇದೀಗ 1,876 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ದೆಹಲಿ ಪೊಲೀಸ್‌ ಪಡೆಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ವೆಬ್‌ಸೈಟ್‌ https://ssc.nic.in/ ಗೆ ಭೇಟಿ ನೀಡಿ.

ಸಿಬ್ಬಂದಿ ನೇಮಕಾತಿ ಆಯೋಗ
ಹುದ್ದೆ ಹೆಸರು : ಸಬ್‌ ಇನ್ಸ್‌ಪೆಕ್ಟರ್
ಹುದ್ದೆಗಳ ಸಂಖ್ಯೆ : 1,876

ಹುದ್ದೆಗಳ ವಿವರ :
ದೆಹಲಿ ಪೊಲೀಸ್‌ ಪಡೆ ಸಬ್‌ ಇನ್ಸ್‌ಪೆಕ್ಟರ್ (ಪುರುಷ) : 109
ದೆಹಲಿ ಪೊಲೀಸ್‌ ಪಡೆ ಸಬ್‌ ಇನ್ಸ್‌ಪೆಕ್ಟರ್ (ಮಹಿಳಾ) : 53
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಬ್‌ಇನ್ಸ್‌ಪೆಕ್ಟರ್‌ (ಪುರುಷ) : 1601
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಬ್‌ಇನ್ಸ್‌ಪೆಕ್ಟರ್‌ (ಮಹಿಳಾ) : 113

ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ 5000 ರೂಪಾಯಿ | ಹೇಗೆ ಪಡೆಯುವುದು ?

ವಿದ್ಯಾರ್ಹತೆ :
ಯಾವುದೇ ವಿಶ್ವವಿದ್ಯಾಲಯ / ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಾಸ್ ಮಾಡಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ದೆಹಲಿ ಪೊಲೀಸ್‌ ಎಸ್‌ಐ ಹುದ್ದೆಗೆ ವಾಹನ ಚಾಲನ ಪರವಾನಗಿ ಪಡೆದಿರಬೇಕು.

ವಯಸ್ಸಿನ ಅರ್ಹತೆ :
ದಿನಾಂಕ 01-08-2023 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.
ಸರ್ಕಾರಿ ನಿಯಮಗಳನ್ವಯ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಕೆಟಗರಿಯವರಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ |  ಇಲ್ಲಿದೆ ಮಾಹಿತಿ..

ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭ ದಿನಾಂಕ: 22-07-2023
ಆನ್‌ಲೈನ್‌ ಅರ್ಜಿ ಸ್ವೀಕಾರ ಕೊನೆ ದಿನಾಂಕ: 15-08-2023 ರ ರಾತ್ರಿ 11 ಗಂಟೆವರೆಗೆ.
ಅರ್ಜಿ ತಿದ್ದುಪಡಿಗೆ ಕೊನೆ ದಿನಾಂಕ : ಆಗಸ್ಟ್‌ 16 ರಿಂದ 17, 2023
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಅಕ್ಟೋಬರ್, 2023

ಅರ್ಜಿ ಸಲ್ಲಿಸುವ ವಿಧಾನ :
– ಎಸ್‌ಎಸ್‌ಸಿ ವೆಬ್‌ಸೈಟ್‌ https://ssc.nic.in/ ಗೆ ಭೇಟಿ ನೀಡಿ.
– ಓಪನ್ ಆದ ಪೇಜ್‌ ನಲ್ಲಿ ‘New User? Registration Here’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ.

ಅಪ್ಲಿಕೇಶನ್ ಶುಲ್ಕ ಮಾಹಿತಿ : ರೂ.100.

ಕರ್ನಾಟಕದಲ್ಲಿ ಎಲ್ಲೆಲ್ಲಿ ಪರೀಕ್ಷೆ ?
ಬೆಂಗಳೂರು, ಉಡುಪಿ, ಕಲಬುರಗಿ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ.

ಕೃಷಿ ಇಲಾಖೆಯಿಂದ ‘ಕೃಷಿ ಪಂಡಿತ’ ಪ್ರಶಸ್ತಿಗೆ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..

ವೇತನ ಶ್ರೇಣಿ :
ಸಬ್‌ಇನ್ಸ್‌ಪೆಕ್ಟರ್ (ಜಿಡಿ) ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ : Rs.35,400-1,12,400.
ಸಬ್‌ಇನ್ಸ್‌ಪೆಕ್ಟರ್ (ಎಕ್ಸಿಕ್ಯೂಟಿವ್)- ದೆಹಲಿ ಪೊಲೀಸ್ :Rs.35,400-1,12,400.

ನೇಮಕ ಪ್ರಕ್ರಿಯೆ ಹಂತಗಳು :
1. ಪೇಪರ್‌-1 ಲಿಖಿತ ಪರೀಕ್ಷೆ
2. ಪೇಪರ್‌-2 ಲಿಖಿತ ಪರೀಕ್ಷೆ
3. ದೈಹಿಕ ಸಾಮರ್ಥ್ಯ ಪರೀಕ್ಷೆ / ದೈಹಿಕ ಸಹಿಷ್ಣುತೆ ಪರೀಕ್ಷೆ.
4. ಡೀಟೇಲ್ಡ್‌ ಮೆಡಿಕಲ್ ಟೆಸ್ಟ್‌

ಆನ್‌ಲೈನ್‌ ಅರ್ಜಿ ಸ್ವೀಕಾರ ಕೊನೆ ದಿನಾಂಕ: 15-08-2023 ರ ರಾತ್ರಿ 11 ಗಂಟೆವರೆಗೆ.

ವೆಬ್‌ಸೈಟ್‌ https://ssc.nic.in/ ಗೆ ಭೇಟಿ ನೀಡಿ.


Share news

Related Articles

Leave a Reply

Your email address will not be published. Required fields are marked *

Back to top button