Jobs

ಸಶಸ್ತ್ರ ಪಡೆಗಳ ಮೆಡಿಕಲ್ ಸೇವೆಗಳ 650 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಪಡೆಗಳಲ್ಲಿ ವೈದ್ಯಕೀಯ ಸೇವೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. 650 ಮೆಡಿಕಲ್ ಆಫೀಸರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-09-2023

BHARATHAVANI NEWS

ನೇಮಕಾತಿ ಪ್ರಾಧಿಕಾರ : ಸಶಸ್ತ್ರ ಪಡೆಗಳ ಮೆಡಿಕಲ್ ಸೇವೆಗಳ ನೇಮಕಾತಿ ವಿಭಾಗ
ಹುದ್ದೆ ಹೆಸರು : ವೈದ್ಯಾಧಿಕಾರಿಗಳು
ಹುದ್ದೆಗಳ ಸಂಖ್ಯೆ : 650

ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮ | ಏನಿದು ನಿಯಮ ?

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-08-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-09-2023

ಅರ್ಹತೆಗಳು
ಎಂಬಿಬಿಎಸ್ ಡಿಗ್ರಿ ಓದಿದವರಿಗೆ ಗರಿಷ್ಠ 30 ವರ್ಷದವರೆಗೆ, ಪಿಜಿ ಡಿಗ್ರಿ ಓದಿದವರಿಗೆ ಗರಿಷ್ಠ 35 ವರ್ಷದವರೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಂದಿನ ಅಕ್ಟೋಬರ್ ತಿಂಗಳಲ್ಲಿ (ಸಂಭಾವ್ಯ) ದೆಹಲಿಯಲ್ಲಿ ಸಂದರ್ಶನ ನಡೆಸಲಾಗುತ್ತದೆ.

ಇತರೆ ಹೆಚ್ಚಿನ ಮಾಹಿತಿಗಳನ್ನು ಆಗಸ್ಟ್‌ 12 ರಂದು ಬಿಡುಗಡೆ ಮಾಡಿದ ಎಂಪ್ಲಾಯ್ಮೆಂಟ್ ನ್ಯೂಸ್ / ರೋಜ್‌ಗಾರ್ ಸಮಾಚಾರ್ ನಲ್ಲಿ ಚೆಕ್‌ ಮಾಡಿಕೊಳ್ಳಬಹುದು. ಅಥವಾ ವೆಬ್‌ಸೈಟ್‌ https://amcsscentry.org/ ಗೆ ಭೇಟಿ ನೀಡಿ ಪಡೆಯಬಹುದು.

ಗಮನಿಸಿ : ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ | ಏನಿದು ಬದಲಾವಣೆ ?

ರಿಜಿಸ್ಟ್ರೇಷನ್‌ ಪಡೆಯಲು ಬೇಕಾದ ದಾಖಲೆಗಳು :

  • ಹೆಸರು
  • ಇ-ಮೇಲ್‌ ವಿಳಾಸ
  • ಮೊಬೈಲ್ ನಂಬರ್
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಜನ್ಮ ದಿನಾಂಕ ಪ್ರಮಾಣ ಪತ್ರ
  • ಎಂಬಿಬಿಎಸ್, ಎಂಡಿ ಪದವಿ ಪ್ರಮಾಣ ಪತ್ರ
  • ಆಧಾರ್‌ ಕಾರ್ಡ್
  • ಕಾರ್ಯಾನುಭವಿಗಳಾಗಿದ್ದಲ್ಲಿ ಪ್ರಮಾಣ ಪತ್ರ
  • ಇತರೆ

ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಮೇಲೆ ತಿಳಿಸಿದ ಮೂಲದಾಖಲೆಗಳನ್ನು ಹಾಜರುಪಡಿಸಬೇಕು. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಹುದ್ದೆಗೆ ನಿಯೋಜನೆ ಮಾಡಿಕೊಳ್ಳಲಾಗುವುದು.

Apply Online

ವೇತನ ಮಾಹಿತಿ
ಸಶಸ್ತ್ರ ಪಡೆಗಳ ಮೆಡಿಕಲ್ ಆಫೀಸರ್‌ಗಳಿಗೆ ಕ್ಯಾಪ್ಟನ್ ರ್ಯಾಂಕ್‌ 10ಬಿ ಲೆವೆಲ್ ರಕ್ಷಣಾ ಪಡೆಗಳ ಪೇ ಮೆಟ್ರಿಕ್ಸ್‌ ಪ್ರಕಾರ ರೂ.61,300 ಬೇಸಿಕ್ ಪೇ, ರೂ.15,500 ಎಂಎಸ್‌ಪಿ, ಜತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ವೆಬ್‌ಸೈಟ್‌ https://amcsscentry.org/ ಗೆ ಭೇಟಿ ನೀಡಿ

ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ..


Share news

Related Articles

Leave a Reply

Your email address will not be published. Required fields are marked *

Back to top button