Jobs

IBPS : ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಇಲ್ಲಿದೆ ಮಾಹಿತಿ…

Share news

ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 4,451 ಪ್ರೊಬೇಷನರಿ ಆಫೀಸರ್ (3049) ಸ್ಪೆಷಲ್‌ಆಫೀಸ‌ (1402)ಗಳ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರೊಬೇಷನರಿ ಆಫೀಸರ್ ಹಾಗೂ ಮ್ಯಾನೇಜ್ಮೆಂಟ್‌ ಟ್ರೈನಿ ಪೋಸ್ಟ್‌ಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

BHARATHAVANI NEWS

ಆನ್‌ಲೈನ್ ಮೂಲಕ https://www.ibps.in/ಅರ್ಜಿ ಸಲ್ಲಿಸಬೇಕು.

ಆಗಸ್ಟ್ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 21 ಅರ್ಜಿ ಸಲ್ಲಿಸಲು ಕೊನೆ SE.

ಈ ಹುದ್ದೆಗಳಿಗೆ ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ.

ವಯೋಮಿತಿ : ಕನಿಷ್ಠ 20 ವರ್ಷಗಳು ಗರಿಷ್ಠ 30 ವರ್ಷಗಳು. ಸರ್ಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1850 ಹಾಗೂ ಎಸ್‌ಸಿ/ಎಸ್‌ಟಿ/ ಅಂಗವಿಕಲರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3175 ಶುಲ್ಕ ನಿಗದಿಪಡಿಸಲಾಗಿದೆ.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

ಶೈಕ್ಷಣಿಕ ಅರ್ಹತೆ : ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಸ್ಪೆಷಲ್ ಆಫೀಸರ್ ಗಳ ಹುದ್ದೆಗಳಿಗೆ ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ ವಿಜ್ಞಾನ, ಡೇರಿ ಸೈನ್ಸ್, ಫಿಶರಿ ಸೈನ್ಸ್, ಅಗ್ರಿ , ಮಾರ್ಕೆಟಿಂಗ್ ಅಂಡ್ ಕೋಆಪರೇಷನ್‌, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ಇನ್ನರ್ಮೇಶನ್ ಟೆಕ್ನಾಲಜಿ, ಎಚ್ ಆರ್ ಎಚ್‌ಆರ್‌ಡಿ, ಕಾನೂನು ಪದವಿ, ಎಂಬಿಎ, ಹಿಂದಿ ಹಾಗೂ ಸಂಸ್ಕೃತದಲ್ಲಿ ಸ್ನಾತಕೋತ್ತರ ಸಹಿತ ಯಾವುದಾದರೂ ಒಂದು ಪದವಿ ಪಡೆದಿರಬೇಕು. ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.

ಆನ್‌ಲೈನ್‌ನಲ್ಲೇ ಕರ್ನಾಟಕ ಭೂ ದಾಖಲೆಗಳ ಮಾಹಿತಿ ಪಡೆಯುವುದು ಹೇಗೆ ?

ಪರೀಕ್ಷೆ ಪೂರ್ವಭಾವಿ ತರಬೇತಿಗೆ ಪ್ರವೇಶ ಪತ್ರ ಬಿಡುಗಡೆ: ಸೆಪ್ಟೆಂಬರ್ 2023
ಪರೀಕ್ಷೆ ಪೂರ್ವ ತರಬೇತಿ ನಡೆಸುವ ಅವಧಿ : ಸೆಪ್ಟೆಂಬರ್ 2023
ಪೂರ್ವ ಭಾವಿ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ : ಸೆಪ್ಟೆಂಬರ್ 2023
ಪ್ರಿಲಿಮ್ಸ್ ಆನ್‌ಲೈನ್‌ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ / ಅಕ್ಟೋಬರ್ 2023
ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ಫಲಿತಾಂಶ ದಿನಾಂಕ: ಅಕ್ಟೋಬರ್ 2023

BHARATHAVANI NEWS

ಪಿಒ / ಎಂಟಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ
ಪಿಒ/ಎಂಟಿ ಆನ್‌ಲೈನ್‌ ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ಅಕ್ಟೋಬರ್ /ನವೆಂಬರ್ 2023
ಆನ್‌ಲೈನ್‌ ಮುಖ್ಯ ಪರೀಕ್ಷೆ ದಿನಾಂಕ : ನವೆಂಬರ್ 2023
ಮುಖ್ಯ ಪರೀಕ್ಷೆ ಫಲಿತಾಂಶ ದಿನಾಂಕ: ಡಿಸೆಂಬರ್ 2023
ಸಂದರ್ಶನಕ್ಕೆ ಪ್ರವೇಶ ಪತ್ರ ಬಿಡುಗಡೆ ದಿನಾಂಕ: ಜನವರಿ / ಫೆಬ್ರುವರಿ 2024
ಸಂದರ್ಶನ ನಡೆಸುವ ದಿನಾಂಕ: ಜನವರಿ / ಫೆಬ್ರುವರಿ 2024
ಪ್ರಾವಿಷನಲ್ ಅಲಾಟ್ಮೆಂಟ್ : ಏಪ್ರಿಲ್ 2024

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಲಿಂಕ್‌ ಕೆಳಗಿನಂತಿದೆ.

IBPS PO/MT Exam 2023 – Apply Online

ಅರ್ಜಿ ಶುಲ್ಕ ವಿವರ

  • ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ರೂ.850.
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.850.
  • SC / ST / PWD ಅಭ್ಯರ್ಥಿಗಳಿಗೆ ರೂ.175.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಡೆಬಿಟ್‌ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್, ಕ್ಯಾಶ್‌ ಕಾರ್ಡ್‌ ಇತರೆ ಮಾರ್ಗಗಳಲ್ಲಿ ಪಾವತಿಸಬಹುದು.
  • ಐಬಿಪಿಎಸ್‌ ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್‌ ಟ್ರೈನಿ ಪೋಸ್ಟ್‌ಗಳಿಗೆ ಅಭ್ಯರ್ಥಿಗಳ ಆಯ್ಕೆಯ ಪರೀಕ್ಷೆ ವಿಧಾನ ಕೆಳಗಿನಂತಿರುತ್ತದೆ.

ಪರೀಕ್ಷೆ ವಿಧಾನ

  • ಐಬಿಪಿಎಸ್‌ ಪಿಒ / ಎಂಟಿ ಹುದ್ದೆಗಳಿಗೆ ಈ ಕೆಳಗಿನ ಮಾದರಿಯ ಮೂರು ಹಂತದ ಪರೀಕ್ಷೆ ನಡೆಸಲಾಗುತ್ತದೆ.
  • ಆನ್‌ಲೈನ್‌ ಪ್ರಿಲಿಮಿನರಿ ಪರೀಕ್ಷೆ – ಟೈಯರ್ -1
  • ಆನ್‌ಲೈನ್‌ ಮೇನ್ಸ್ ಪರೀಕ್ಷೆ – ಟೈಯರ್ – 2
  • ಸಂದರ್ಶನ ಪರೀಕ್ಷೆ (ಆಯಾ ಬ್ಯಾಂಕ್‌ಗಳಲ್ಲಿ ಅಥವಾ ನೋಡಲ್‌ ಕೇಂದ್ರಗಳಲ್ಲಿ)

ಪರೀಕ್ಷೆ ಭಾಷೆ
ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಯಾವುದಾದರೂ ಒಂದರಲ್ಲಿ ಪರೀಕ್ಷೆ ಬರೆಯಬಹುದು. ಅರ್ಜಿ ಸಲ್ಲಿಸುವಾಗಲೇ ಪರೀಕ್ಷೆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು.

IBPS PO/MT Exam 2023 – Apply Online

ಆನ್‌ಲೈನ್‌ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಹೇಗೆ ? | ಇಲ್ಲಿದೆ ಸಂಪೂರ್ಣ ಮಾಹಿತಿ…


Share news

Related Articles

Leave a Reply

Your email address will not be published. Required fields are marked *

Back to top button