Jobs

Indian Postal Service : ಕರ್ನಾಟಕ ರಾಜ್ಯದ ಅಂಚೆ ಕಚೇರಿಗಳ 1,678 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಇಂಡಿಯನ್‌ ಪೋಸ್ಟ್‌ ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ 30,041 ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ವರ್ಷದ ಎರಡನೇ ಬೃಹತ್‌ ಸಂಖ್ಯೆ ನೇಮಕಾತಿ ಪ್ರಕಟಣೆ ಇದು. ಕರ್ನಾಟಕ ರಾಜ್ಯದ ಎಲ್ಲ ಅಂಚೆ ಕಚೇರಿಗಳು ಸೇರಿದಂತೆ ಒಟ್ಟು 1,678 ಹುದ್ದೆಗಳು ಖಾಲಿ ಇವೆ. 

BHARATHAVANI NEWS

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಏನಿದು, ಅರ್ಜಿ ಸಲ್ಲಿಸುವುದು ಹೇಗೆ ?

ಅರ್ಜಿಗೆ ಆಗಸ್ಟ್‌ 23 ಕೊನೆ ದಿನ. ಯಾವುದೇ ಎಕ್ಸಾಮ್‌ ನಡೆಸದೇ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಕರ್ನಾಟಕದಲ್ಲಿನ ಅಂಚೆ ವಿಭಾಗವಾರು ಹುದ್ದೆಗಳ ಸಂಖ್ಯೆ :

ಬಾಗಲಕೋಟೆ : 29
ಬಳ್ಳಾರಿ: 43
ಬೆಂಗಳೂರು ಜಿಪಿಒ : 6
ಬೆಳಗಾವಿ: 42
ಬೆಂಗಳೂರು ಪೂರ್ವ ವೃತ್ತ : 11
ಬೆಂಗಳೂರು ದಕ್ಷಿಣ ವೃತ್ತ: 4
ಬೆಂಗಳೂರು ಪಶ್ಚಿಮ ವೃತ್ತ: 6
ಬೀದರ್ : 49
ಚನ್ನಪಟ್ಟಣ: 66
ಚಿಕ್ಕಮಗಳೂರು: 63
ಚಿಕ್ಕೋಡಿ: 44
ಚಿತ್ರದುರ್ಗ: 51
ದಾವಣಗೆರೆ ಕಛೇರಿ: 47
ಧಾರವಾಡ: 36
ದಗ: 63
ಗೋಕಾಕ್: 13
ಹಾಸನ: 44
ಹಾವೇರಿ: 33
ಕಲಬುರಗಿ: 44
ಕಾರವಾರ: 53
ಕೊಡಗು: 44
ಕೋಲಾರ: 75
ಮಂಡ್ಯ: 78
ಮಂಗಳೂರು: 52
ಮೈಸೂರು: 43
ನಂಜನಗೂಡು: 41
ಪುತ್ತೂರು: 89
ರಾಯಚೂರು: 49
ಆರ್‌ಎಂಎಸ್ ಹೆಚ್‌ಬಿ: 44
ಆರ್‌ಎಂಎಸ್ ಕ್ಯೂ: 6
ಶಿವಮೊಗ್ಗ: 74
ಶಿರಸಿ: 48
ತುಮಕೂರು: 81
ಉಡುಪಿ: 109
ವಿಜಯಪುರ: 65
ಯಾದಗಿರಿ: 33

ಕನಿಷ್ಠ 18 ವರ್ಷದಿಂದ 40 ವರ್ಷದವರೆಗಿನ ಭಾರತೀಯ ಪ್ರಜೆಗಳು ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಸಲ್ಲಿಸಬಹುದು. ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳಿಗೆ ಮಾಸಿಕ 29,000 ವರೆಗೆ ಸಂಬಳ ನೀಡಲಾಗುತ್ತದೆ.

ಭಾರತೀಯ ಅಂಚೆ ಗ್ರಾಮೀಣ ಡಾಕ್‌ ಸೇವಕ್ ಹುದ್ದೆಗಳಿಗೆ ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸುವ ವಿಧಾನ :

ಹಂತ- 1

  • ಅಂಚೆ ಇಲಾಖೆ ವೆಬ್‌ಸೈಟ್‌ ವಿಳಾಸ https://indiapostgdsonline.in/ref_validation.aspx ಗೆ ಭೇಟಿ ನೀಡಿ.
  • ಅಂಚೆ ಇಲಾಖೆ ಮುಖಪುಟದಲ್ಲಿ ‘Stage 1.Registration’ ಎಂಬಲ್ಲಿ ಕ್ಲಿಕ್ ಮಾಡಿ.
  • 2 ಆಯ್ಕೆಗಳು ಪ್ರದರ್ಶಿತವಾಗುತ್ತವೆ. ‘Registration’ ಆಯ್ಕೆ ಕ್ಲಿಕ್ ಮಾಡಿ.
  • ಅಪ್ಲಿಕೇಶನ್‌ ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ ಮೊಬೈಲ್ ನಂಬರ್, ಇ-ಮೇಲ್ ವಿಳಾಸ, ಕೇಳಲಾದ ಇತರೆ ಮಾಹಿತಿ ನೀಡಿ.
  • ನಂತರ ಮೊಬೈಲ್ ನಂಬರ್, ಇ-ಮೇಲ್‌ ವಿಳಾಸಕ್ಕೆ OTP ಬರುತ್ತದೆ. ಇದನ್ನು ನೀಡುವ ಮೂಲಕ ವ್ಯಾಲಿಟೇಡ್‌ ಮಾಡಬೇಕಾಗುತ್ತದೆ. ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ರಿಜಿಸ್ಟ್ರೇಷನ್‌ ನಂಬರ್ ಕ್ರಿಯೇಟ್ ಆಗುತ್ತದೆ. ನೀವು ಅರ್ಜಿ ಸಲ್ಲಿಸುತ್ತಿರುವ ಅಂಚೆ ವೃತ್ತದ ಹೆಸರು ನೆನಪಿರಲಿ.

ಹಂತ-2

  • https://indiapostgdsonline.gov.in/ ಮತ್ತೆ ಭೇಟಿ ನೀಡಿ.
  • ಇಲ್ಲಿ ‘Stage 2.Apply Online Apply’ ಆಯ್ಕೆ ಕ್ಲಿಕ್ ಮಾಡಿ.
  • ರಿಜಿಸ್ಟರ್ ನಂಬರ್ ನೀಡಿ, ನಿಮ್ಮ ಸರ್ಕಲ್ ಆಯ್ಕೆ ಮಾಡಿ.
  • ‘Submit’ ಎಂಬಲ್ಲಿ ಕ್ಲಿಕ್ ಮಾಡಿ. ಮತ್ತೊಂದು ವೆಬ್‌ಪೇಜ್‌ ಪ್ರದರ್ಶಿತವಾಗುತ್ತದೆ.
  • ಅಗತ್ಯ ಮಾಹಿತಿಗಳನ್ನು ನೀಡಿ. ಅಪ್ಲಿಕೇಶನ್‌ ಪೂರ್ಣಗೊಳಿಸಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ ಲಿಂಕ್ ನೀಡಲಾಗಿರುತ್ತದೆ. ಶುಲ್ಕ ಪಾವತಿಸಿ.
  • ನಂತರ ‘Application Status’ ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ ಅರ್ಜಿ ಸ್ಥಿತಿ ತಿಳಿಯಬಹುದು.
  • ಅರ್ಜಿ ಶುಲ್ಕ ಪಾವತಿ ನಂತರ ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಡೌನ್‌ಲೋಡ್‌ / ಪ್ರಿಂಟ್‌ ಮಾಡಿಕೊಳ್ಳಬಹುದು.

ಆನ್‌ಲೈನ್‌ನಲ್ಲೇ ಕರ್ನಾಟಕ ಭೂ ದಾಖಲೆಗಳ ಮಾಹಿತಿ ಪಡೆಯುವುದು ಹೇಗೆ ?

ಹಂತ-3

  • https://indiapostgdsonline.gov.in/ ಗೆ ಭೇಟಿ ನೀಡಿ ‘Fee Payment Check Fee Status’ ಆಯ್ಕೆ ಕ್ಲಿಕ್ ಮಾಡಿ.
  • ಓಪನ್ ಆಗುವ ವೆಬ್‌ ಪೇಜ್‌ನಲ್ಲಿ ರಿಜಿಸ್ಟ್ರೇಷನ್ ನಂಬರ್ ನೀಡಿ, ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ನಂತರ ನೀವು ಇಲ್ಲೂ ಸಹ ಅರ್ಜಿ ಶುಲ್ಕ ಪಾವತಿಗೆ ಅಥವಾ ಅರ್ಜಿ ಶುಲ್ಕ ಪಾವತಿಸಿರುವ ಕುರಿತು ಚೆಕ್‌ ಮಾಡಿಕೊಳ್ಳಬಹುದು.

ಆನ್‌ಲೈನ್‌ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಹೇಗೆ ? | ಇಲ್ಲಿದೆ ಸಂಪೂರ್ಣ ಮಾಹಿತಿ…

This image has an empty alt attribute; its file name is image.png
BHARATHAVANI NEWS

Share news

Related Articles

Leave a Reply

Your email address will not be published. Required fields are marked *

Back to top button