Jobs

NCC ವಿದ್ಯಾರ್ಥಿಗಳಿಗೆ ಭಾರತದ ಮಿಲಿಟರಿ ಪಡೆಯಲ್ಲಿ ಉದ್ಯೋಗ ಅವಕಾಶ | ಅರ್ಜಿ ಸಲ್ಲಿಸಲು ಸಂಪೂರ್ಣ ವಿವರ ಇಲ್ಲಿದೆ..

Share news

ಭಾರತ ಮಿಲಿಟರಿ ಪಡೆಯು NCC ಸ್ಪೆಷಿಯಲ್ ಎಂಟ್ರಿ ಸ್ಕೀಮ್‌ ಮೂಲಕ 2024ರ ಏಪ್ರಿಲ್‌ ತಿಂಗಳಲ್ಲಿ ಆರಂಭಿಸಲಿರುವ 55ನೇ ಬ್ಯಾಚ್‌ ಕೋರ್ಸ್‌ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್‌ 03 ಅರ್ಜಿಗೆ ಕೊನೆ ದಿನವಾಗಿದೆ.

ಆನ್‌ಲೈನ್‌ ಅರ್ಜಿಗೆ ಭೇಟಿ ನೀಡಬೇಕಾದ ವೆಬ್‌ ವಿಳಾಸ : https://joinindianarmy.nic.in

ಹುದ್ದೆಗಳ ವಿವರ :

ನೇಮಕಾತಿ ಪ್ರಾಧಿಕಾರ : ಭಾರತ ರಕ್ಷಣಾ ಸಚಿವಾಲಯ
ಹುದ್ದೆ ಹೆಸರು: ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಸ್ಕೀಮ್‌ ಸೇನಾ ಹುದ್ದೆಗಳು
ಎನ್‌ಸಿಸಿ ಪ್ರವೇಶದ ಪುರುಷ ಹುದ್ದೆಗಳ ಸಂಖ್ಯೆ : 50
ಎನ್‌ಸಿಸಿ ಪ್ರವೇಶದ ಮಹಿಳಾ ಹುದ್ದೆಗಳ ಸಂಖ್ಯೆ : 5

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ (KSOU) ಏಕಕಾಲದಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05-07-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03-08-2023

ವಯಸ್ಸಿನ ಅರ್ಹತೆ :
ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಆಗಿರಬೇಕು, ಗರಿಷ್ಠ 25 ವರ್ಷ ಮೀರದ ಅಭ್ಯರ್ಥಿಗಳು ಅಪ್ಲಿಕೇಶನ್‌ ಹಾಕಬಹುದು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ (KSOU) ಹಲವು ಕೋರ್ಸ್​ಗಳಿಗೆ ಪ್ರವೇಶ ಆರಂಭ | ಯಾವೆಲ್ಲ ಕೋರ್ಸ್ ಇಲ್ಲಿವೆ ಮಾಹಿತಿ.

ಆರ್ಮಿ ಎನ್‌ಸಿಸಿ ಎಂಟ್ರಿಗೆ ವಿದ್ಯಾರ್ಹತೆ/ ಇತರೆ ಮಾನದಂಡಗಳು

ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ ಅಭ್ಯರ್ಥಿಗಳು ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಸ್ಕೀಮ್‌ ಕೋರ್ಸ್‌ ಮೂಲಕ ಇಂಡಿಯನ್ ಆರ್ಮಿ ಸೇರಲು ಯಾವುದೇ ಪದವಿಯನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.

  • ಅಭ್ಯರ್ಥಿಗಳು ಕನಿಷ್ಠ 2 ಅಥವಾ 3 ವರ್ಷ ಎನ್‌ಸಿಸಿ ಸೀನಿಯರ್ ಡಿವಿಷನ್‌ ನಲ್ಲಿ / wg ನಲ್ಲಿ ಸೇವೆ ಸಲ್ಲಿಸಿರಬೇಕು.
  • ಎನ್‌ಸಿಸಿ ‘ಸಿ’ ಸರ್ಟಿಫಿಕೇಷನ್‌ ಪರೀಕ್ಷೆಯಲ್ಲಿ ‘ಬಿ’ ಗ್ರೇಡ್‌ ಅನ್ನು ಪಡೆದಿರಬೇಕು.
  • ಸಿ ಸರ್ಟಿಫಿಕೇಟ್‌ ಪಡೆಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಸೇನೆಯು ಎನ್‌ಸಿಸಿ ವಿಶೇಷ ಎಂಟ್ರಿ ಮೂಲಕ ರೆಗ್ಯುಲರ್‌ ಆರ್ಮಿಗೆ 14 ವರ್ಷಗಳ ಸೇವೆಗೆ ಸೇರಿಸಿಕೊಳ್ಳಲಿದೆ. ಪ್ರಾಥಮಿಕವಾಗಿ 10 ವರ್ಷ ಸೇವೆಗೆ ಸೇರಿಸಿಕೊಳ್ಳುತ್ತದೆ. ನಂತರ 4 ವರ್ಷಗಳ ಅವಧಿಗೆ ಸೇವೆ ಮುಂದೂಡುವ ಅವಕಾಶ ಇರುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ | ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ | Sukanya samriddhi yojana

ಎನ್‌ಸಿಸಿ ವಿಶೇಷ ಎಂಟ್ರಿ ಸ್ಕೀಮ್‌ ಮೂಲಕ ಭಾರತೀಯ ಆರ್ಮಿಗೆ ಸೇರುವ ಅಭ್ಯರ್ಥಿಗಳಿಗೆ, ಅವರು ಪಡೆವ ಭಡ್ತಿ ಮೂಲಕ ನಿಯೋಜನೆಗೊಳ್ಳುವ ವಿವಿಧ ಹುದ್ದೆಗಳಿಗೆ ವೇತನ ಶ್ರೇಣಿ ರೂ.56,100 ರಿಂದ ರೂ.2,50,000 ವರೆಗೆ ಮಾಸಿಕ ಸಂಬಳ ಇರುತ್ತದೆ. ಎನ್‌ಸಿಸಿ ಮೂಲಕ ಪಡೆವ ಪ್ರಮೋಷನ್‌ ಹುದ್ದೆಗಳ ಪೈಕಿ ಯಾವ ಹುದ್ದೆಗೆ ಎಷ್ಟು ವೇತನ ಎಂದು ಕೆಳಗಿನಂತೆ ನೀಡಲಾಗಿದ

ಆನ್‌ಲೈನ್‌ ಅರ್ಜಿಗೆ ಭೇಟಿ ನೀಡಬೇಕಾದ ವೆಬ್‌ ವಿಳಾಸ : https://joinindianarmy.nic.in


Share news

Related Articles

Leave a Reply

Your email address will not be published. Required fields are marked *

Back to top button