Jobs

SBI : 439 ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ ?

Share news

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ 439 ಎಸ್‌ಸಿಒ (ಸ್ಪೆಷಲಿಸ್ಟ್‌ ಕೇಡರ್ ಆಫೀಸರ್) ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿ, ನೋಟಿಫಿಕೇಶನ್‌ ಹೊರಡಿಸಲಾಗಿದೆ.

ಹುದ್ದೆಗೆ ವಯಸ್ಸಿನ ಅರ್ಹತೆ

ವಿವಿಧ ಹುದ್ದೆಗಳಿಗೆ ವಿವಿಧ ವಯಸ್ಸಿನ ಅರ್ಹತೆ ನಿಗದಿಪಡಿಸಲಾಗಿರುತ್ತದೆ. ಕನಿಷ್ಠ 23 ರಿಂದ ಗರಿಷ್ಠ 50 ವರ್ಷದವರೆಗಿನ ಅಭ್ಯರ್ಥಿಗಳು ಮಾತ್ರ ಸ್ಪೆಷಲಿಸ್ಟ್ ಕೇಡರ್‌ ಆಫೀಸರ್‌ ಪೋಸ್ಟ್‌ಗಳಿಗೆ ಅರ್ಜಿ ಹಾಕಬಹುದು.

ಶೈಕ್ಷಣಿಕ ಅರ್ಹತೆ

ಪದವಿ / ಸ್ನಾತಕೋತ್ತರ ಪದವಿ / ಬಿಇ ಪಾಸ್‌ ಮಾಡಿರಬೇಕು. ಹುದ್ದೆವಾರು ಶೈಕ್ಷಣಿಕ ಅರ್ಹತೆ ತಿಳಿಯಲು ಅಧಿಸೂಚನೆ ಡೌನ್‌ಲೋಡ್‌ ಮಾಡಿ ಓದಿರಿ.

ಪ್ರಮುಖ ದಿನಾಂಕಗಳು


ಅಪ್ಲಿಕೇಶನ್ ಸಲ್ಲಿಕೆಗೆ ಅರಂಭಿಕ ದಿನಾಂಕ : 21-09-2023
ಅಪ್ಲಿಕೇಶನ್‌ ಸಲ್ಲಿಕೆಗೆ ಕೊನೆ ದಿನಾಂಕ : 06-10-2023
ಆನ್‌ಲೈನ್‌ ಪರೀಕ್ಷೆ ಸಂಭಾವ್ಯ ದಿನಾಂಕ : 2023 ಡಿಸೆಂಬರ್ / 2024 ಜನವರಿ

ಅಪ್ಲಿಕೇಶನ್‌ ಶುಲ್ಕ ವಿವರ


ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.750.
SC /ST/PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಯುಪಿಐ ಪೇಗಳ ಮೂಲಕ ಪಾವತಿ ಮಾಡಬಹುದು.

ಭೇಟಿ ನೀಡಿ ಅರ್ಜಿ ಸಲ್ಲಿಸಿ

https://recruitment.bank.sbi/crpd-sco-2023-24-22/apply

ಡೌನ್ಲೋಡ್

ಹೆಚ್ಚಿನ ಮಾಹಿತಿಗಾಗಿ

https://bank.sbi/


Share news

Related Articles

Leave a Reply

Your email address will not be published. Required fields are marked *

Back to top button