All Kannada Newsಪ್ರೇರಣೆಲೇಖನ ಸಂಗಮ

ಬೃಹತ್ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್ ಬಳಸಿ 70 ಲಕ್ಷ ಗಳಿಸುತ್ತಿರುವ ಸ್ಟಾರ್ಟ್ಅಪ್ ಯಶೋಗಾಥೆ

Share news

ಪುಣೆ ಮೂಲದ ಉದ್ಯಮವಾಗಿ ‘ರಿಚರಕ’ (reCharkha) ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬ್ಯಾಗ್‌ಗಳು, ಟೇಬಲ್ ಮ್ಯಾಟ್‌ಗಳು, ಗೃಹಾಲಂಕಾರ ವಸ್ತುಗಳು ಮತ್ತು ಇತರ ಉತ್ಪನ್ನಗಳಾಗಿ ಮಾಡುತ್ತಿದೆ ಮತ್ತು ಕಲಾತ್ಮಕ ಕೌಶಲ್ಯಗಳನ್ನು ಪುನರುಜ್ಜೀವನಗೊಳಿಸುತ್ತಿದೆ. ಇಲ್ಲಿಯವರೆಗೆ 7 ಲಕ್ಷ ಪ್ಲಾಸ್ಟಿಕ್ ಪ್ಯಾಕೆಟ್‌ಗಳನ್ನು ನವೀಕರಿಸಿದ್ದು, 70 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದ್ದಾರೆ.

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅಮಿತಾ ದೇಶಪಾಂಡೆ ಅವರು ಸ್ಥಾಪಿಸಿದ ಸ್ಟಾರ್ಟ್ ಅಪ್ ಸಂಸ್ಥೆಯ ಮೂಲಕ ಸುತ್ತಮುತ್ತಲಿನ ಸ್ಥಳೀಯ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ ಮತ್ತು ದಾದ್ರಾ ನಗರ ಹವೇಲಿಯ ಆದಿವಾಸಿಗಳನ್ನು ಇದಕ್ಕಾಗಿ ನೇಮಿಸಿಕೊಂಡಿದ್ದಾರೆ. 70 ಪ್ರತಿಶತದಷ್ಟು ಉದ್ಯೋಗಿಗಳು ಮಹಿಳೆಯರಿಗಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯವನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತದೆ ನಂತರ ಅದನ್ನು ಸ್ವಚ್ಛಗೊಳಿಸಲಾಗುತ್ತದೆ ಹಾಗೂ ತೊಳೆದು ಒಣಗಿಸಲಾಗುತ್ತದೆ ನಂತರ ಅದನ್ನು ಬಣ್ಣದ ಆಧಾರದ ಮೇಲೆ ವಿಂಗಡಿಸಿ ನೇಯ್ಗೆ ಮಾಡಲು ಮರುಬಳಕೆ ಘಟಕಕ್ಕೆ ಕಳುಹಿಸಲಾಗುತ್ತದೆ.

ಉತ್ಪಾದನಾ ಪ್ರಕ್ರಿಯೆಯು ಪ್ಲಾಸ್ಟಿಕ್ ಅನ್ನು ಚರಕದ ಮೂಲಕ ನೂಲಿಗೆ ತಿರುಗಿಸಿ ನಂತರ ಅದನ್ನು ಕೈಮಗ್ಗದಲ್ಲಿ ಪ್ಲಾಸ್ಟಿಕ್ ಫೈಬರ್‌ನಲ್ಲಿ ನೇಯಲಾಗುತ್ತದೆ. ಯಂತ್ರಗಳನ್ನು ಬಳಸುವುದನ್ನು ಕಡಿಮೆಗೊಳಿಸಿ ಮಾನವ ಶಕ್ತಿಯ ಬಳಕೆಯನ್ನು ಹೆಚ್ಚಿಸಿ ಕೈಯಿಂದಲೇ ವಸ್ತುಗಳನ್ನು ತಯಾರಿಸಲಾಗುತ್ತದೆ.

ನಮ್ಮ ಪ್ರತಿ ಗ್ರಾಮವು ಒಂದು ಕಾಲದಲ್ಲಿ ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿತ್ತು ಆದರೆ ವೇಗವಾಗಿ ನಗರಗಳು ಜನ ಜೀವನ ಬೆಳೆದಂತೆ ಕುಶಲಕರ್ಮಿಗಳು ತಮ್ಮ ಕಲೆಗಳನ್ನು ಬಿಟ್ಟು ಬೇರೆ ಜೀವನೋಪಾಯ ಹುಡುಕುವ ಪರಿಸ್ಥಿತಿ ನಿರ್ಮಾಣವಾಯಿತು. ಹಾಗಾಗಿ ReCharkha ಕಲಾತ್ಮಕ ಕೌಶಲ್ಯಗಳನ್ನು ಪುನರುಜ್ಜೀವನಗೊಳಿಸುತ್ತಿದೆ ಮತ್ತು ಪ್ಲಾಸ್ಟಿಕ್ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ.

ಆರಂಭದಲ್ಲಿ ಜನರು ಅಮಿತಾ ಅವರ ಉತ್ಪನ್ನಗಳ ಮೌಲ್ಯವನ್ನು ನೋಡಲಿಲ್ಲ ತಮ್ಮ ಉತ್ಪನ್ನಗಳ ತಯಾರಿಕೆ ಮತ್ತು ತಮ್ಮ ಆಲೋಚನೆಗಳನ್ನು ಸಾರ್ವಜನಿಕರಿಗೆ ಸರಿಯಾಗಿ ತಿಳಿಸಲು, ಅವರು ಸಂಪೂರ್ಣ ಪ್ರಕ್ರಿಯೆಯನ್ನು ಪ್ರದರ್ಶಿಸುವ ವೀಡಿಯೊವನ್ನು ಮಾಡಿದರು. ತ್ಯಾಜ್ಯವನ್ನು ಪ್ರತ್ಯೇಕಿಸುವುದರಿಂದ ಹಿಡಿದು ಅಂತಿಮ ಉತ್ಪನ್ನದವರೆಗೆ ಅವರು ತೋರಿಸಿದರು. ಕಾರ್ಯಾಗಾರಗಳು, ಪ್ರದರ್ಶನಗಳು ಮತ್ತು ಹೆಚ್ಚಿನವುಗಳಲ್ಲಿ ಇದರ ಕುರಿತು ಜಾಗೃತಿ ಮೂಡಿಸಿದರು ಇದರಿಂದ ನಿಧಾನವಾಗಿ ಮಾರಾಟವು ಏರಿತು.

ಸ್ಟಾರ್ಟ್ ಅಪ್ ಮೂಲಕ ದೇಶದ ಅಭಿವೃದ್ಧಿಗೆ ಹಾಗೂ ಪರಿಸರದ ಕಾಳಜಿಯೊಂದಿಗೆ ಜವಾಬ್ದಾರಿಯುತ ಕೆಲಸದ ಮೂಲಕ ಜೀವನೋಪಾಯವನ್ನು ಹೇಗೆ ಸೃಷ್ಟಿಸಬಹುದು ಎಂಬುದಕ್ಕೆ ಅಮಿತಾ ಅವರು ಸ್ಪೂರ್ತಿದಾಯಕ ಉದಾಹರಣೆ. ಪ್ಲಾಸ್ಟಿಕ್ ಸರಿಯಾಗಿ ಬಳಸಿ ತ್ಯಾಜ್ಯವನ್ನು ಕಡಿಮೆಗೊಳಿಸಿ ಪರಿಸರ ಸ್ನೇಹಿಯಾಗಿ ಬೆಳೆದ ಅಮಿತಾ ಅವರ ಯಶೋಗಾಥೆ ಯುವಕರಿಗೆ ನಿಜಕ್ಕೂ ಪ್ರೇರಣೆ ನೀಡಿತ್ತದೆ.

Visit : https://www.recharkha.org/


Share news

Related Articles

Leave a Reply

Your email address will not be published. Required fields are marked *

Back to top button