All Kannada Newsರಾಷ್ಟ್ರೀಯ

ಗ್ರಾಮದಲ್ಲಿ ಪ್ರಾರಂಭವಾದ ವಿಶಿಷ್ಟವಾದ ಯೋಚನೆ ‘ಡಿಜಿಟಲ್ ಲಾಕ್ ಡೌನ್’

Share news

ಮಹಾರಾಷ್ಟ್ರದ ಗ್ರಾಮದಲ್ಲಿ ಮಕ್ಕಳನ್ನು ಮೊಬೈಲ್‌ ಅತಿಯಾದ ಬಳಕೆಯಿಂದ ಹೊರತಂದು ಕಲಿಕೆಯತ್ತ ಸೆಳೆಯಲು ಈ ಗ್ರಾಮದಲ್ಲಿ ‘ಡಿಜಿಟಲ್‌ ಲಾಕ್‌ಡೌನ್‌’ ಘೋಷಿಸಲಾಗಿದೆ. ನಿತ್ಯ ಸಂಜೆ 7ರಿಂದ 8.30ರವರೆಗೆ ಮೊಬೈಲ್‌, ಟಿ.ವಿ ಬಳಕೆ ನಿಷೇಧಿಸಲಾಗಿದೆ ಹೀಗೆ ಮಕ್ಕಳ ಭವಿಷ್ಯಕ್ಕಾಗಿ
ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್‌ ತಾಲ್ಲೂಕಿನ ಮೋಹಿತೆ ವಡಗಾಂವ ಗ್ರಾಮಸ್ಥರು ಆ.14ರಿಂದ ಹೊಸ ಪದ್ಧತಿ ಜಾರಿ ಮಾಡಿದ್ದು ಸಂಜೆ ಹೊತ್ತಿನಲ್ಲಿ ಮಕ್ಕಳು ಮೊಬೈಲ್‌ ಬದಿಗಿರಿಸಿ ಅಭ್ಯಸಿಸುತ್ತಿದ್ದಾರೆ. ಗ್ರಾಮದ ಜನಸಂಖ್ಯೆ ಸುಮಾರು 3 ಸಾವಿರ ಅದರಲ್ಲಿ 450 ಮಕ್ಕಳು 1ರಿಂದ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಅನಗತ್ಯವಾಗಿ ಮೊಬೈಲ್‌ ಬಳಸುತ್ತಿದ್ದರು ಹೀಗಾಗಿ, ಗ್ರಾಮದ ಹಿರಿಯರೆಲ್ಲ ಸೇರಿ ಚರ್ಚಿಸಿ, ನಿತ್ಯ ಒಂದೂವರೆ ತಾಸು ಮೊಬೈಲ್‌, ಟಿ.ವಿ ಬಳಕೆಗೆ ನಿರ್ಬಂಧ ಹೇರುವ ನಿರ್ಣಯವನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೈಗೊಂಡಿದ್ದಾರೆ.

ಗ್ರಾಮದೇವರಾದ ಭೈರವನಾಥ ಮಂದಿರದ ಮೇಲೆ ಸೈರನ್‌ ಅಳವಡಿಸಲಾಗಿದೆ. ಸಂಜೆ 7ಕ್ಕೆ ಅದನ್ನು ಬಾರಿಸಿದ ಕೂಡಲೇ ಜನರು ಮೊಬೈಲ್‌ ಬದಿಗಿರಿಸಿ ಮನೆಯಲ್ಲಿ ಟಿ.ವಿ ಬಳಕೆ ನಿಲ್ಲಿಸುತ್ತಾರೆ. ಮಕ್ಕಳೆಲ್ಲ ಮನೆಯಲ್ಲಿ ಅಭ್ಯಾಸ ಮಾಡುತ್ತಾರೆಈ ಅವಧಿಯಲ್ಲಿ ಜನರೂ ಟಿ.ವಿ ನೋಡದೆ, ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಚರ್ಚೆಯಲ್ಲಿ ತೊಡಗುತ್ತಾರೆ. ಎರಡು ತಿಂಗಳಿಂದ ಇದನ್ನು ಅನುಸರಿಸುತ್ತಿರುವುದರಿಂದ ಮಕ್ಕಳ ಕಲಿಕೆಯಲ್ಲಿ ಸುಧಾರಣೆ ಕಂಡುಬಂದಿದೆ. ಈ ರೀತಿ ವಿಶಿಷ್ಟವಾದ ಆಲೋಚನೆಯೊಂದಿಗೆ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ತರುವ ನಿಟ್ಟಿನಲ್ಲಿ ಮಾದರಿ ಕ್ರಮವನ್ನು ಗ್ರಾಮಸ್ಥರು ಪ್ರಾರಂಭಿಸಿರುವುದು ಶ್ಲಾಘನೀಯ.


Share news

Related Articles

Leave a Reply

Your email address will not be published. Required fields are marked *

Back to top button