All Kannada Newsಬೆಳಗಾವಿರಾಜ್ಯ

ಕೇಂದ್ರ ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಜಿಲ್ಲೆಗಳಲ್ಲಿ ಬೆಳಗಾವಿಗೆ 10ನೇ ಸ್ಥಾನ

Share news

ಭಾರತ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿ‌ಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆ ದೇಶದಲ್ಲಿಯೇ 10ನೇ ಸ್ಥಾನ ಗಳಿಸಿದ ಮಹತ್ವದ ಸಾಧನೆ ಗುರುತಿಸಿ ಕೇಂದ್ರ ಸರಕಾರವು ನವದೆಹಲಿಯ ಹ್ಯಾಬಿಟ್ಯಾಟ್ ಸೆಂಟರ್ ನ ಸನ್ಮಾನ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರನ್ನು ಗೌರವಿಸಿ, ಸನ್ಮಾನಿಸಲಾಗಿದೆ.

ಕೇಂದ್ರ ಸರಕಾರದ ವತಿಯಿಂದ ಏಪ್ರಿಲ್ 12, 2022 ರಿಂದ ಹಮ್ಮಿಕೊಳ್ಳಲಾಗಿದ್ದ ಆಝಾದಿಸೇ ಅಂತ್ಯೋದಯ ತಕ್ ಅಭಿಯಾನವು 15ನೇ ಆಗಸ್ಟ್ 2022 ರಂದು ಮುಕ್ತಾಯಗೊಂಡಿತ್ತು. ಈ ಅಭಿಯಾನದಲ್ಲಿ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 75 ಜಿಲ್ಲೆಗಳು ಭಾಗವಹಿಸಿದ್ದವು. ಈ ಅಭಿಯಾನದಲ್ಲಿ ಕೇಂದ್ರ ಸರಕಾರದ ಆಯ್ದ 9 ಇಲಾಖೆಗಳ 17 ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ನಾಗರಿಕರಿಗೆ ಹಾಗೂ ಫಲಾನುಭವಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿ ಶೇ.84.85 ರಷ್ಟು ಸಾಧನೆಯನ್ನು ಬೆಳಗಾವಿ ಜಿಲ್ಲೆಯು ದಾಖಲಿಸಿದೆ.

ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆ ಸೇರಿದಂತೆ ಒಟ್ಟಾರೆ 9 ಇಲಾಖೆಗಳ 17 ಯೋಜನೆಗಳ ಪ್ರಗತಿಯನ್ನು ಪರಿಗಣಿಸಿ ದೇಶದಲ್ಲೇ 10ನೇ ಸ್ಥಾನ ನೀಡಲಾಗಿದೆ. ಹೀಗೆ ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಬೆಳಗಿವಿ ತನ್ನದೇ ಆದ ರೀತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿಗೊಂಡು ಇಂದು ದೇಶವೇ ಗುರುತಿಸಿ ಪ್ರಶಂಸಿದ್ದು ಕರ್ನಾಟಕ ರಾಜ್ಯ ಹೆಮ್ಮೆ ಪಡುವ ಸಂಗತಿ.


Share news

Related Articles

Leave a Reply

Your email address will not be published. Required fields are marked *

Back to top button