All Kannada Newsರಾಷ್ಟ್ರೀಯ

35 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಪ್ರಾರಂಭವಾದ ಸಿನಿಮಾ ಥಿಯೇಟರ್

Share news

ಜಮ್ಮು ಮತ್ತು ಕಾಶ್ಮೀರದ ಪ್ರದೇಶದಲ್ಲಿ 35 – 40 ವರ್ಷಗಳ ಕಾಲ ಮನರಂಜನೆಯಿಂದ, ಸಿನಿಮಾಗಳಿಂದ ದೂರ ಉಳಿದಿದ್ದ ಕಾಲ ಅಂತ್ಯಗೊಂಡಿದೆ. ಇದೀಗ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದಶವನ್ನಾಗಿ ಘೋಷಿಸಿದ ಬಳಿಕ ಇಡೀಯ ಕಾಶ್ಮೀರದ ಚಿತ್ರಣ ನಿಧಾನವಾಗಿ ಬದಲಾಗಿತ್ತಿದೆ. ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್‌ನಲ್ಲಿ ಎರಡು ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಗೊಂಡಿದೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಮಲ್ಟಿಪ್ಲೆಕ್ಸ್ ಥಿಯೇಟರ್ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ದಿನ ಬಾಗ್ ಮಿಲ್ಕಾ ಬಾಗ್ ಬಾಲಿವುಡ್ ಚಿತ್ರ ಪ್ರದರ್ಶಿಸಲಾಗಿದೆ. ಕಾಶ್ಮೀರದ ಸಿನಿಮಾ ಥಿಯೇಟರ್‌ಗಳನ್ನು ಮುಚ್ಚುವ ಕೆಲಸವೂ ನಡೆಯಿತು.1985ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಎಲ್ಲಾ ಸಿನಿಮಾ ಥಿಯೇಟರ್‌ಗಳು ಮುಚ್ಚಿ ಹೋಗಿತ್ತು. ಇನ್ನು 1999ರಲ್ಲಿ ಲಾಲ್ ಚೌಕ್‌ನಲ್ಲಿ ಸಿನಿಮಾ ಥಿಯೇಟರ್ ಮತ್ತೆ ತೆರೆಯಲಾಯಿತು. ಆದರೆ ಅಷ್ಟೇ ವೇಗದಲ್ಲಿ ಈ ಚಿತ್ರಮಂದಿರ ಮುಚ್ಚಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಜನರು 1990ರ ಬಳಿಕ ಹೊರಗಡೆ ಹೋಗಿ ಸಿನಿಮಾ ಮಂದಿರದಲ್ಲಿ ಚಿತ್ರ ನೋಡಿದ ಊದಾಹರಣೆಗಳಿಲ್ಲ. ಹೋಗುವ ಅವಕಾಶವೂ ಇರಲಿಲ್ಲ. ಇದೀಗ ಮತ್ತೆ ಅಭಿವೃದ್ಧಿಯತ್ತ ಸಾಗುತ್ತಿದೆ.

ಈ ಮಲ್ಲಿಪ್ಲೆಕ್ಸ್ ಥಿಯೇಟರ್‌ದ ಕಣಿವೆ ರಾಜ್ಯದ ಜನತೆಗೆ ಎಲ್ಲರಂತೆ ಸಿನಿಮಾ ವೀಕ್ಷಿಸಲು ಸಾಧ್ಯವಾಗಲಿದೆ. ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರಗಳು ಈ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಆದರೆ ಈ ಮಲ್ಟಿಪ್ಲೆಕ್ಸ್ ಥಿಯೇಟರ್ ಕೇವಲ ಚಿತ್ರಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವ ಸಮೂಹಕ್ಕೆ ತರಬೇತಿ ನೀಡುವ ಕೇಂದ್ರಗಳು ಆಗಿವೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ. ಸಿನಿಮಾ ಪ್ರೊಡಕ್ಷನ್, ನಿರ್ಮಾಣ, ಕಿರು ಚಿತ್ರ ನಿರ್ಮಾಣ, ನಿರ್ದೇಶನ ಕುರಿತು ತರಬೇತಿಗಳನ್ನು ನೀಡಲಾಗುತ್ತದೆ ಎಂದು ಮನೋಜ್ ಸಿನ್ಹ ಹೇಳಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button