All Kannada Newsಅಂತಾರಾಷ್ಟ್ರೀಯ

16 ದೇವತೆಗಳಿರುವ ದುಬೈನ ವಿಶಿಷ್ಟವಾದ ಹಿಂದೂ ದೇವಾಲಯ ಅಕ್ಟೋಬರ್ 5ರಂದು ಲೋಕಾರ್ಪಣೆಗೊಳ್ಳಲಿದೆ

Share news

ದುಬೈನಲ್ಲಿ ನಿರ್ಮಿಸಲಾಗಿರುವ ಅರಬ್‌ ಸಂಯುಕ್ತ ಸಂಸ್ಥಾನದ ದೇಗುಲ ಲೋಕಾರ್ಪಣೆಗೊಳ್ಳುವುದಕ್ಕೂ ಮೊದಲೇ ದೇಗುಲಕ್ಕೆ ಸಾಕಷ್ಟು ಜನರು ಬರಲು ಪ್ರಾರಂಭಿಸಿದ್ದಾರೆ. ಆರಾಧನೆಯ ಗ್ರಾಮ ಎಂದೇ ಕರೆಸಿಕೊಳ್ಳುವ ಜೆಬೆಲ್‌ ಅಲಿಯಲ್ಲಿ ನಿರ್ಮಾಣವಾಗಿರುವ ದೇಗುಲವು ದಸರಾ ದಿನವಾದ ಅ.5ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.

ದೇಗುಲದ ಭೇಟಿಗೆ ಮುಂಗಡ ಬುಕಿಂಗ್‌ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಅಕ್ಟೋಬರ್‌ ಅಂತ್ಯದವರೆಗೂ ಬುಕಿಂಗ್‌ ಆಗಿದೆಯೆಂದು ದೇವಸ್ಥಾನದ ಆಡಳಿತ ತಿಳಿಸಿದೆ. ದೇಗುಲದ ಆವರಣದಲ್ಲಿ 16 ದೇವತೆಗಳ ಮೂರ್ತಿಯಿದ್ದು, ದಿನಕ್ಕೆ ಮೂರು ಬಾರಿ ಮಂತ್ರ ಪಠಣೆಯಾಗುತ್ತಿದೆ. ಭಾರತ ಮೂಲದ 14 ಪಂಡಿತರು ಮಂತ್ರ ಪಠಣೆ ಜವಾಬ್ದಾರಿ ಹೊತ್ತಿದ್ದು, ಅದರಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೂ ಅವಕಾಶವಿದೆ. ದೇಗುಲದಲ್ಲಿ ಬೆಳಗ್ಗೆ 6.30ರಿಂದ ರಾತ್ರಿ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವಾಲಯದ ಒಳಭಾಗ ಮತ್ತು ಮುಂಭಾಗದಲ್ಲಿರುವ ಅದರ ಪ್ರಾಂಗಣವು ಭಾರತದ ಗುಜರಾತ್‌ನಲ್ಲಿರುವ ಸೋಮನಾಥ ದೇವಾಲಯದ ಸಾಂಪ್ರದಾಯಿಕ ಶೈಲಿಯಿಂದ ಸ್ಫೂರ್ತಿ ಪಡೆದಿವೆ. ಮುಖ್ಯ ಗುಮ್ಮಟವು ಉತ್ತರ ಭಾರತದಲ್ಲಿ ಪ್ರಧಾನವಾಗಿ ಕಂಡುಬರುವ ಹಿಂದೂ ದೇವಾಲಯದ ವಾಸ್ತುಶಿಲ್ಪದ ನಾಗರಾ ಶೈಲಿಯಿಂದ ಕೂಡಿದೆ.

ಖಲೀಜ್ ಟೈಮ್ಸ್ ವರದಿಯ ಪ್ರಕಾರ, 25,000 ಚ.ಅ 75 ಮಿಲಿಯನ್ (ರೂ. 1,48,86,24,396) ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.ದೇವಾಲಯದ ವಾಸ್ತುಶಿಲ್ಪವು ವಿಶಿಷ್ಟವಾದ ಅರೇಬಿಯನ್ ನೋಟವನ್ನು ಹೊಂದಿದ್ದು, ದೇವಾಲಯದ ಸಂಕೀರ್ಣದಲ್ಲಿರುವ ಬೋಧನಾ ಕೊಠಡಿಯಲ್ಲಿ ಗೀತಾ ತರಗತಿಗಳು, ಭರತನಾಟ್ಯ ತರಗತಿಗಳು ಇತರ ತರಬೇತಿಗಳನ್ನು ಹೊಂದಿದೆ ಹೀಗೆ ಇದರಿಂದ ದುಬೈನ ಹಿಂದೂಗಳಿಗೆ ದೇವಾಲಯವು ಅತ್ಯಂತ ಪ್ರಮುಖವಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button