All Kannada Newsಅಂತಾರಾಷ್ಟ್ರೀಯ

ಕೆನಾಡದ ನೆಲದಲ್ಲಿ ಭಗವದ್ಗೀತೆ ಗ್ರಂಥದ ‘ಗೀತಾ ಪಾರ್ಕ್’ ಸ್ಥಾಪನೆ

Share news

ಕೆನಡಾದ ಸಂಸತ್ತಿನಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಸ್ಥಾಪಿಸಲು ಇಲ್ಲಿನ ಸರ್ಕಾರ ಯೋಜನೆ ರೂಪಿಸಿದೆ. ಕೆನಡಾದ ಸಂಸತ್ತಿನ ಕ್ವೀನ್ಸ್ ಪಾರ್ಕ್‌ನಲ್ಲಿ ಗೀತಾ ಗ್ರಂಥವನ್ನು ಸ್ಥಾಪಿಸಿದ್ದಾರೆ. ಗೀತಾ ಪಾರ್ಕ್ ಭೂಮಿ ಪೂಜೆಯು ಒಂಟಾರಿಯೊದ ಬ್ರಾಂಪ್ಟನ್ ನಗರದಲ್ಲಿ ನಡೆಯಲಿದೆ.

ಭಗವದ್ಗೀತೆಯನ್ನು ವಿದೇಶಿ ನೆಲದಲ್ಲಿ ಸ್ಥಾಪಿಸುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ ಯುಕೆಯ ಲಂಡನ್ ‌(London) ಸಂಸತ್ತಿನಲ್ಲಿ ಮತ್ತು ಮಾರಿಷಸ್ ಅಧ್ಯಕ್ಷರ ಮನೆಯಲ್ಲಿ ಕೂಡ ಹಿಂದುಗಳ ಪವಿತ್ರ ಗ್ರಂಥವಾದ ಗೀತಾವನ್ನು ಸ್ಥಾಪಿಸಲಾಗಿದೆ. ಬ್ರಾಂಪ್ಟನ್ ಕೌನ್ಸಿಲ್ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದೆ ಮತ್ತು ಪಾರ್ಕ್‌ ನಲ್ಲಿ ಕೃಷ್ಣ-ಅರ್ಜುನ ರಥವನ್ನು ಸಹ ಸ್ಥಾಪಿಸಲಾಗುವುದು ಎಂದು ಹೇಳಿದೆ.

ಗೀತಾ ಪಾರ್ಕ್ ಎಂದು ಹೆಸರಿಸುವ ಬಗ್ಗೆ ಚರ್ಚೆ ಮಾಧ್ಯಮಗಳೊಂದಿಗೆ ಮಾತನಾಡಿದ ಛಾಬ್ರಾ, ಸ್ವಾಮಿ ಜ್ಞಾನಾನಂದರು ಸುಮಾರು ಎರಡು ತಿಂಗಳ ಹಿಂದೆ ಕೆನಡಾಕ್ಕೆ ಹೋಗಿದ್ದರು ಮತ್ತು ಪಾರ್ಕ್‌ಗೆ ಗೀತಾ ಪಾರ್ಕ್ ಎಂದು ಹೆಸರಿಸಲು ಬ್ರಾಂಪ್ಟನ್‌ನ ಮೇಯರ್ ಮತ್ತು ಕೌನ್ಸಿಲರ್‌ಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.ಈ ಬಾರಿಯ ಹರಿಯಾಣದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಕೂಡ ಕೆನಡಾದಲ್ಲಿ ಆಯೋಜನೆಯಾಗುತ್ತಿದ್ದು, ಉತ್ಸವವು ಸೆಪ್ಟೆಂಬರ್ 16 ರಿಂದ 19 ರವರೆಗೆ ನಡೆಯಲಿದೆ. ಕಳೆದ ಆರು ವರ್ಷಗಳಿಂದಲೂ ವಿದೇಶದಲ್ಲಿ ನಡೆಯುತ್ತಿದ್ದ ಉತ್ಸವ ಈ ವರ್ಷ ಕೆನಡಾದ ಮಿಸಿಸೌಗಾದಲ್ಲಿರುವ ಲಿವಿಂಗ್ ಆರ್ಟ್ ಸೆಂಟರ್ ನಲ್ಲಿ ನಡೆಯಲಿದೆ.


Share news

Related Articles

Leave a Reply

Your email address will not be published. Required fields are marked *

Back to top button