All Kannada Newsರಾಷ್ಟ್ರೀಯ

ಲತಾ ಮಂಗೇಶ್ಕರ್ ನೆನಪಿನಲ್ಲಿ’40 ಅಡಿ ಉದ್ದದ’ ವೀಣೆಯ ಉದ್ಘಾಟನೆ

Share news

ದಿವಂಗತ ಗಾಯಕಿ ಲತಾ ಮಂಗೇಶ್ಕರ್ ಅವರ ಜನ್ಮದಿನದಂದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತದ ನೈಟಿಂಗೇಲ್ ಹೆಸರಿನ ಕ್ರಾಸಿಂಗ್ ಅನ್ನು ಉದ್ಘಾಟಿಸಿದ್ದಾರೆ. ಲತಾ ಮಂಗೇಶ್ಕರ್ ಚೌಕ್ ಅನ್ನು ಸಿಎಂ ಯೋಗಿ ಅವರು ಅಯೋಧ್ಯೆಯಲ್ಲಿ ಪ್ರಮುಖ ಆಕರ್ಷಣೆಯಾಗಿ ಕ್ರಾಸಿಂಗ್ ನಲ್ಲಿ 40 ಅಡಿ ಉದ್ದದ ವೀಣೆಯನ್ನು ಸ್ಥಾಪಿಸಲಾಗಿದೆ. ಇದರ ತೂಕ ಸುಮಾರು 14 ಟನ್ ಹೊಂದಿದೆ. ಎರಡು ತಿಂಗಳಲ್ಲಿ ರಾಮ್ ಸುತಾರ್ ಎಂಬ ಕಲಾವಿದನು ವೀಣೆಯನ್ನು ವಿನ್ಯಾಸಗೊಳಿಸಿದ್ದರೆ.

ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದಿವಂಗತ ಲತಾ ಮಂಗೇಶ್ಕರ್ ಅವರನ್ನು ಭಗವಾನ್ ರಾಮನ ಶಿಷ್ಯೆ ಎಂದು ಕರೆದಿದ್ದಾರೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾದಾಗ ಅವರು ತುಂಬಾ ಸಂತೋಷಪಟ್ಟರು ಎಂದು ಹೇಳಿದರು.ಈ ಚೌಕ್ ರಾಮ್ ಕಿ ಪೈಡಿ (ಸರಯು ನದಿಯ ದಡದಲ್ಲಿದೆ) ಮತ್ತು ಸರಯೂಗೆ ಹತ್ತಿರದಲ್ಲಿದೆ ಹಾಗಾಗಿ ಅವರಿಗೆ ಗೌರವ ಸಲ್ಲಿಸಲು ಇದಕ್ಕಿಂತ ಉತ್ತಮವಾದ ಸ್ಥಳ ಇಲ್ಲ ಎಂದು ಮೋದಿ ಹೇಳುವ ಮೂಲಕ ಲತಾ ಮಂಗೇಶ್ಕರ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಲತಾ ಮಂಗೇಶ್ಕರ್ ಅವರು ನಮ್ಮ ದೇಶದ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿದ್ದರು, ಅವರಿಗೆ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ. ಹಿಂದಿ ಸಂಗೀತ ಉದ್ಯಮಕ್ಕೆ ಅವರ ಕೊಡುಗೆ ಯಾವಾಗಲೂ ಸಾಟಿಯಿಲ್ಲದಂತೆ ಉಳಿಯುತ್ತದೆ. 92 ನೇ ವಯಸ್ಸಿನಲ್ಲಿ, ಅವರು ಫೆಬ್ರವರಿ 6, 2022 ರಂದು ಮಲ್ಟಿಪಲ್ ಆರ್ಗನ್ ಡಿಸ್ಫಂಕ್ಷನ್ ಸಿಂಡ್ರೋಮ್ಗೆ ಬಲಿಯಾದರು. ಅವರ ನೆನಪಿಗಾಗಿ ಉತ್ತರ ಪ್ರದೇಶದಲ್ಲಿ ವೀಣೆಯನ್ನು ಸ್ಥಾಪಿಸಲಾಗಿದೆ.ಇಂದು ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಲಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button