All Kannada Newsಅಂತಾರಾಷ್ಟ್ರೀಯ

4 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಿದ ಭಾರತ

Share news

ಭಾರತವು ಬಾಂಗ್ಲಾದೇಶಕ್ಕೆ ನಾಲ್ಕು ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಕಳುಹಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಗೋಧಿಯ ಪೂರೈಕೆಯು ಭಾರತದ ಬೆಳೆಯ ಪರಿಸ್ಥಿತಿ ಮತ್ತು ಬಾಂಗ್ಲಾದೇಶದ ಅಗತ್ಯತೆಗಳನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಭೇಟಿಯ ಕುರಿತು ವಿಶೇಷ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕ್ವಾತ್ರಾ ಅವರು ಭಾರತವು 4 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿದೆ ಎಂದು ತಿಳಿಸಿದ್ದಾರೆ.

ನಾವು ಬಾಂಗ್ಲಾದೇಶದೊಂದಿಗೆ ಮತ್ತು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಮಾಡುವ ಅಭಿವೃದ್ಧಿ ಸಹಕಾರ ಪಾಲುದಾರಿಕೆ ಯೋಜನೆಗಳ ವ್ಯಾಪ್ತಿಯು ಸಾಕಷ್ಟು ವಿಸ್ತಾರವಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಸಾಕಷ್ಟು ಪಾಲುದಾರಿಕೆ ಇದೆ, ಇದು ರೈಲ್ವೆ ಸಂಪರ್ಕ ಯೋಜನೆ, ರಸ್ತೆ ಯೋಜನೆಗಳು, ಸೇತುವೆಗಳ ನಿರ್ಮಾಣ ಇತ್ಯಾದಿಗಳನ್ನು ಒಳಗೊಂಡಿದೆ ಎಂದು ವಿನಯ್ ಮೋಹನ್ ಕ್ವಾತ್ರಾ ‌ಹೇಳಿದ್ದಾರೆ.

ಎರಡು ದೇಶಗಳ ಸಂಪರ್ಕಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಸಹಿ ಹಾಕಲಾದ ಒಪ್ಪಂದಗಳನ್ನು ಅವರು ನೆನಪಿಸಿಕೊಂಡರು. ಶೇಖ್ ಹಸೀನಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಏಳು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button