All Kannada Newsರಾಷ್ಟ್ರೀಯ

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಡೈರಿ ಉತ್ಪನ್ನಗಳ ಉತ್ಪಾದಕ ರಾಷ್ಟ್ರ

Share news

ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್‌ನಲ್ಲಿ ಆಯೋಜಿಸಲಾದ ಇಂಟರ್ನ್ಯಾಷನಲ್ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯುಡಿಎಸ್) 2022 ರ ಉದ್ಘಾಟಿನಾ ಸಮಾರಂಭದಲ್ಲಿ ಈ ಶೃಂಗಸಭೆಯು ಜನರು ಪರಸ್ಪರ ಕಲಿಯಲು ಮತ್ತು ಡೈರಿ ಕ್ಷೇತ್ರದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ʻಪಶು ಧಾನ್ʼ ಪರಿಕಲ್ಪನೆಯು ನಮ್ಮ ಭಾರತೀಯ ಸಂಪ್ರದಾಯದ ಭಾಗವಾಗಿದ್ದು, ಭಾರತದಲ್ಲಿ ಡೈರಿ ಕ್ಷೇತ್ರದ ಬಲ ಸಣ್ಣ ರೈತರು ಮತ್ತು ಜನಸಾಮಾನ್ಯರ ಉತ್ಪಾದನೆಯು ಪ್ರಮುಖ ಭಾಗವಾಗಿದೆ. ಇದು ಪ್ರಪಂಚದಾದ್ಯಂತದ ಕೋಟಿಗಟ್ಟಲೆ ಜನರಿಗೆ ಜೀವನಾಧಾರದ ಪ್ರಮುಖ ಮೂಲ ಕೂಡಾ ಹೌದು. ಭಾರತದ ಡೈರಿ ಕ್ಷೇತ್ರ ಹೆಚ್ಚಾಗಿ ಜನಸಾಮಾನ್ಯರ ಉತ್ಪಾದನೆಯಿಂದಲೇ ಗುರುತಿಸಲ್ಪಟ್ಟಿದೆ. ಇಂದು 8 ಕೋಟಿ ಕುಟುಂಬಗಳು ಡೈರಿ ಕ್ಷೇತ್ರದಿಂದ ಉದ್ಯೋಗ ಪಡೆಯುತ್ತಿರುವುದಾಗಿ ಮೋದದಿ ಹೇಳಿದರು.

ರೈತರ ಸಾಮೂಹಿಕ ಪ್ರಯತ್ನದಿಂದಾಗಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಡೈರಿ ಉತ್ಪನ್ನಗಳ ಉತ್ಪಾದಕ ರಾಷ್ಟ್ರ ಎಂದೆನಿಸಿದೆ. ಪ್ರಪಂಚದ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಡೈರಿ ಕ್ಷೇತ್ರದ ಪ್ರೇರಕ ಶಕ್ತಿ ಸಣ್ಣ ರೈತರೇ ಆಗಿದ್ದಾರೆ ಎಂಬುದನ್ನು ನೆನೆಪಿಸಿಕೊಂಡರು. ಹೈನುಗಾರಿಕೆಯಲ್ಲೂ ಅದಂತ ಡಿಜಿಟಲ್ ಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆನಪಿಸಿಕೊಂಡರು.


Share news

Related Articles

Leave a Reply

Your email address will not be published. Required fields are marked *

Back to top button