All Kannada Newsರಾಜ್ಯ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಕರ್ನಾಟಕದ ಕೋಲಾರ, ಹಾಸನ ಮತ್ತು ರಾಯಚೂರು ನಗರಗಳು ಆಯ್ಕೆ

Share news

ಭಾರತದಲ್ಲಿ ವಿಮಾನಯಾನ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಹಾಗೂ ವಿಸ್ತರಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ‘ಉಡಾನ್‌’ ಯೋಜನೆಯ ಮುಂದಿನ ಹಂತದಲ್ಲಿ ಕರ್ನಾಟಕದ ಕೋಲಾರ, ಹಾಸನ ಮತ್ತು ರಾಯಚೂರು ನಗರಗಳನ್ನು ಪರಿಗಣಿಸಲಾಗಿದೆ. ದೇಶದ 54 ನಗರಗಳ ಪಟ್ಟಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯದ ಮೂರು ನಗರಗಳು ಸ್ಥಾನ ಪಡೆದಿವೆ.

ಪ್ರವಾಸಿ ತಾಣಗಳು, ವನ್ಯಜೀವಿ ಧಾಮ ಮತ್ತು ಧಾರ್ಮಿಕ ಕೇಂದ್ರಗಳ ಸಮೀಪದ ನಗರಗಳನ್ನು ಈ ಹಂತದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಪ್ರವಾಸಿ ತಾಣಗಳು ಸಮೀಪವಿರುವ ವಿಭಾಗದಲ್ಲಿ ರಾಯಚೂರು ಮತ್ತು ಧಾರ್ಮಿಕ ಕೇಂದ್ರಗಳು ಸಮೀಪಿದ ವಿಭಾಗದಲ್ಲಿ ಕೋಲಾರ ಮತ್ತು ಹಾಸನ ನಗರಗಳನ್ನು ಪರಿಗಣಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ವಿಮಾನಯಾನ ಇನ್ನಷ್ಟು ಜನರನ್ನು ತಲುಪಲು ಅಭಿವೃದ್ಧಿಯಾಗದ ಮಾರ್ಗಗಳಲ್ಲಿ ಹೊಸ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ಮತ್ತು ಪ್ರಾದೇಶಿಕವಾಗಿ ವಿಮಾನ ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಉಡಾನ್‌ ಯೋಜನೆ ಘೋಷಿಸಿದೆ. ಇಂತಹ ಮಾರ್ಗಗಳಲ್ಲಿ ಪ್ರಯಾಣ ದರವು ಕಡಿಮೆಯಾಗಲಿದ್ದು, ಕರ್ನಾಟಕಕ್ಕೆ ಮತ್ತಷ್ಟು ಸಹಾಯವಾಗಲಿದೆ.


Share news

Related Articles

Leave a Reply

Your email address will not be published. Required fields are marked *

Back to top button