All Kannada Newsರಾಷ್ಟ್ರೀಯ

‘ಭಾರತ್ ವಿದ್ಯಾ ಇ-ಕಲಿಕಾ’ ವೇದಿಕೆಗೆ ಇಂದು ಚಾಲನೆ ನೀಡಲಿರುವ ನಿರ್ಮಲಾ ಸೀತಾರಾಮನ್

Share news

ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪುಣೆಯಲ್ಲಿ ಓರಿಯೆಂಟಲ್ ಮತ್ತು ದಕ್ಷಿಣ ಏಷ್ಯಾದ ಅಧ್ಯಯನಕ್ಕಾಗಿ ಆನ್‌ಲೈನ್ ಕಲಿಕಾ ವೇದಿಕೆಯಾದ ʻಭಾರತ್ ವಿದ್ಯಾʼಕ್ಕೆ ಇಂದು ಚಾಲನೆ ನೀಡಲಿದ್ದಾರೆ.

ಭಾರತ್ ವಿದ್ಯಾ ವೇದಿಕೆಯು ಮೊದಲ ಇ- ಕಲಿಕಾ ವೇದಿಕೆ ಆಗಿದ್ದು, ಕಲೆ, ವಾಸ್ತುಶಿಲ್ಪ, ತತ್ವಶಾಸ್ತ್ರ, ಭಾಷೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಇಂಡಾಲಜಿಯ ವಿವಿಧ ಅಂಶಗಳನ್ನು ಒಳಗೊಂಡ ಉಚಿತ ಮತ್ತು ಪಾವತಿಸಿದ ಕೋರ್ಸ್‌ಗಳನ್ನು ನೀಡುತ್ತದೆ ಹಾಗೂ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (BORI) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ.

ಮೊದಲಿಗೆ, ವೇದ ವಿದ್ಯೆ, ಭಾರತೀಯ ದರ್ಶನಶಾಸ್ತ್ರ, ಸಂಸ್ಕೃತ ಕಲಿಕೆ, ಮಹಾಭಾರತದ 18 ಪರ್ವಗಳು, ಪುರಾತತ್ತ್ವ ಶಾಸ್ತ್ರದ ಮೂಲಭೂತ ಅಂಶಗಳು ಮತ್ತು ಕಾಳಿದಾಸ ಮತ್ತು ಭಾಷಾ ಆರು ಕೋರ್ಸ್‌ಗಳನ್ನು ಘೋಷಿಸಲಾಗಿದೆ ಆಸಕ್ತರು ಆನ್ಲೈನ್ ಮೂಲಕ ಎಲ್ಲಿಂದಲಾದರೂ ಕಲಿಯುವ ಅವಕಾಶ ಕಲ್ಪಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಸಾಲಿನಲ್ಲಿ ಅನೇಕ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. BORI ತನ್ನ ಕೆಲವು ಕೋರ್ಸ್‌ಗಳಿಗೆ ಕ್ರೆಡಿಟ್‌ಗಳನ್ನು ನೀಡಲು ಕೆಲವು ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗವನ್ನು ಹೊಂದಿದೆ ಹೀಗೆ ಕಲಿಕೆಯ ದೃಷ್ಟಿಯಿಂದ ಇದೊಂದು ಮಹತ್ವದ ಪಾತ್ರವನ್ನು ವಹಿಸಲಿದೆ.


Share news

Related Articles

Leave a Reply

Your email address will not be published. Required fields are marked *

Back to top button