ಮಂಗಳೂರುಸ್ಥಳೀಯ

8ನೇ ವಯಸ್ಸಿನಲ್ಲೇ ಆಫ್ರಿಕಾದ ಕಿಲಿಮಂಜಾರೋ ಶಿಖರವೇರಿದ ಕಿರಿಯ ಸಾಧಕ ಮಂಗಳೂರಿನ ಅಯಾನ್

Share news

ಸಾಧನೆ ಮಾಡಲು ವಯಸ್ಸಿನ ಮೀತಿ ಇಲ್ಲ ಎಂದು ಕಿರಿಯ ವಯಸ್ಸಿನಲ್ಲೇ ಸಾಧಿಸಿ ತೋರಿಸಿದ ಅಯಾನ್. ಮಂಗಳೂರಿನ ಎಂಟು ವರ್ಷದ ಅಯಾನ್ ಮೆಂಡನ್ ಆಗಸ್ಟ್‌ 4 ರಂದು ಆಫ್ರಿಕಾದ ಅತ್ಯುನ್ನತ ಶಿಖರವಾದ ಕಿಲಿಮಂಜಾರೋ ಪರ್ವತವನ್ನು ಏರಿದ ಗಲ್ಫ್ ಸಹಕಾರ ಮಂಡಳಿಯ (GCC) ಅತ್ಯಂತ ಕಿರಿಯ ವಯಸ್ಸಿನ ಪರ್ವತಾರೋಹಿಯಾಗಿದ್ದಾರೆ. ಕಿಲಿಮಂಜಾರೋಗೆ ಎಂಟು ದಿನಗಳ ಪಾದಯಾತ್ರೆಯನ್ನು ಮುಗಿಸಿ ಅಯಾನ್ ಭಾರತದ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ.

ಅಯಾನ್ ಮೆಂಡನ್ ದುಬೈನಲ್ಲಿ ನೆಲೆಸಿದ್ದು, ಮೂಲತ: ಮಂಗಳೂರಿನವರು. ಅವರು ಪ್ರಸ್ತುತ ನಾರ್ತ್ ಲಂಡನ್ ಕಾಲೇಜಿಯೇಟ್ ಸ್ಕೂಲ್ ದುಬೈನಲ್ಲಿ ಓದುತ್ತಿದ್ದಾರೆ. ಆರನೇ ವಯಸ್ಸಿನಿಂದಲೂ ಕಿಲಿಮಂಜಾರೋ ಪರ್ವತವನ್ನು ಹತ್ತಬೇಕೆಂಬುವುದು ಅವರ ಆಸೆಯಾಗಿತ್ತು. ತನ್ನ ಹೆತ್ತವರೊಂದಿಗೆ ಮೌಂಟ್ ಎಲ್ಬ್ರಸ್‌ಗೆ ಪಾದಯಾತ್ರೆಯಲ್ಲಿ ಭಾಗವಾಗದ್ದು, ಚಿಕ್ಕವನಾಗಿದ್ದರಿಂದ ಮುಂದೆ ಕಿಲಿಮಂಜಾರೋ ಶಿಖರವೇರಲು ಪ್ರೇರಣೆ ನೀಡಿತು.

ನೇಪಾಳದಲ್ಲಿ ಅಯಾನ್ ಪರ್ವತಾರೋಹಣದ ಅಭ್ಯಾಸವನ್ನು ಚೆನ್ನಾಗಿ ಮಾಡಿದ್ದರಿಂದ ಹೆತ್ತವರಿಗೆ ಕಿಲಿಮಂಜಾರೊಗೆ ಕರೆದೊಯ್ಯುವ ವಿಶ್ವಾಸವನ್ನು ನೀಡಿತು. ಆದರೆ ತರಬೇತಿ ಸುಲಭವಾಗಿರಲಿಲ್ಲ. ಅಯಾನ್ ತುಂಬಾ ಶಕ್ತಿಯುತ ಇಂತಹ ಸಾಹಸಗಳಿಗೆ ಯಾವಾಗಲೂ ಸಿದ್ಧ. ಈ ಸಾಧನೆ ಮಾಡಲು ಅಯಾನ್ ಎರಡು ವರ್ಷಗಳ ಕಾಲ ತರಬೇತಿ ಪಡೆದಿದ್ದರೆ.

ತರಬೇತಿಯ ತಾಲೀಮು, ದೈಹಿಕ ಚಟುವಟಿಕೆಯನ್ನು ಅವನು ಆನಂದಿಸಿದನು ಮತ್ತು ಅದರಲ್ಲೇ ಎರಡು ವರ್ಷ ನಿರತನಾಗಿದ್ದರು. ಆಹಾರಕ್ರಮವನ್ನು ಅನುಸರಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಧೈರ್ಯ, ದೃಢತೆ, ವರ್ಷಗಳ ತರಬೇತಿ ಅನುಭವ ಮತ್ತು ಅವರ ಪೋಷಕರ ಬೆಂಬಲದೊಂದಿಗೆ ಕೊನೆಗೂ ಕಿಲಿಮಂಜಾರೋ ಪರ್ವತದ ಉಹುರು ಶಿಖರದತ್ತ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಪಾದಯಾತ್ರೆಯನ್ನು ಎಷ್ಟು ಆನಂದಿಸಿದರು ಅಷ್ಟೇ ದಣಿವು ಆಗಿದ್ದು ನಿಜ. ಸಬ್ಜೆರೋ ತಾಪಮಾನ ಮತ್ತು ಸ್ನಾಯು ಸೆಳೆತಗಳು ಬಂದಾಗ, ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಹೊಂದಿಕೊಂಡು ಸಾಗಿ ಕಿರಿಯ ವಯಸ್ಸಿನಲ್ಲೇ ಹೆಮ್ಮೆ ಪಡುವಂತೆ ಸಾಧಿಸಿ ತೋರಿಸಿದ್ದಾರೆ.

ಕೆಲವು ಬಾರಿ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಅವರ ಹೆತ್ತವರು ಕೈಗಳನ್ನು ಹಿಡಿದುಕೊಂಡು ಏರಲು ಸಹಾಯ ಮಾಡಿದರು. ಕೆಲವೊಮ್ಮೆ ದಣಿದಿದ್ದಾಗ ಎತಿಇತ ಹಿಡಿದ ಪರಿಸ್ಥಿತಿಯು ಇದೆ . ಮಾರ್ಗದರ್ಶಕರಿಗಿಂತ ವೇಗವಾಗಿ ಹೋಗುತ್ತಿದ್ದ ಸಂದರ್ಭಗಳೂ ಇದ್ದವು. ಅಯಾನ್ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಿದ ಪೋಷಕರು ಪಾದಯಾತ್ರೆಯನ್ನು ಪೂರ್ಣಗೊಳಿಸುವ ಬಗ್ಗೆ ಚಿಂತಿಸಲಿಲ್ಲ. ಯಾವಾಗಲಾದರೂ ಈ ಪಾದಯಾತ್ರೆಯನ್ನು ನಂತರ ಮಾಡಬಹುದೆಂದು ಹೇಳಿದಾಗ, “ಇಲ್ಲ, ನಾವು ಮೇಲಕ್ಕೆ ಹೋಗೋಣ! ನಾನು ಏರಲು ಬಯಸುತ್ತೇನೆ. ” ಎಂದು ಛಲ ಬಿಡದೆ ಏರಿದನು.

To Read More : https://bharathavani.com/news/

ಅವರೋಹಣ ಮಾಡುವಾಗ, ಅಯಾನ್ ಅವರ ಜೊತೆಗಿದ್ದ ಮಾರ್ಗದರ್ಶಕರನ್ನು ಹಾದು, ಹರ್ಷಚಿತ್ತದಿಂದ ಇಳಿಜಾರಿನಲ್ಲಿ ಓಡಿದರು. ಬೆಟ್ಟದ ತಪ್ಪಲನ್ನು ತಲುಪಿದ ಕೆಲವೇ ಗಂಟೆಗಳಲ್ಲಿ ಅವರ ದಣಿವು ಸಂಪೂರ್ಣವಾಗಿ ಮಾಯವಾಯಿತು. ಹೀಗೆ 8 ವರ್ಷದ ಮಂಗಳೂರಿನ ಅಯಾನ್ ಕಿಲಿಮಂಜಾರೋ ಶಿಖರವನ್ನು ಏರಿದ GCC ಯಲ್ಲಿ ಅತ್ಯಂತ ಕಿರಿಯನಾಗಿದ್ದು, ಈ ಸಾಧನೆಯ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದು ನಿಜಕ್ಕೂ ಸ್ಪೂರ್ತಿದಾಯಕ.


Share news

Related Articles

Leave a Reply

Your email address will not be published. Required fields are marked *

Back to top button