ಪುತ್ತೂರುಸ್ಥಳೀಯ
Trending

ನಿವೇದಿತಾ ಶಿಶುಮಂದಿರದಲ್ಲಿ ಚಿಣ್ಣರ ಕಲರವ

Share news

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾಲೇಜು ಆವರಣದಲ್ಲಿ ಇರುವ ನಿವೇದಿತಾ ಶಿಶುಮಂದಿರದಲ್ಲಿ ದಿನಾಂಕ 29 -1- 2023 ರಂದು ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ನಿವೇದಿತಾ ಶಿಶುಮಂದಿರದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಯು ಜಿ ರಾಧಾ ಅವರು ನಾವು ಪೋಷಕರು ಮಗು ಒಂದು ನಮಸ್ಕಾರವನ್ನು ನಮಗೆ ಮಾಡಿದರೆ ಏನು ಇಲ್ಲದಿದ್ದರೆ ಏನು ಎನ್ನುವುದಾಗಿ ಚಿಂತಿಸುತ್ತೇವೆ ಆದರೆ ಒಂದು ಮಗು ನಮಸ್ಕಾರವನ್ನು ಮಾಡುವುದರಿಂದ ಇಡೀ ಗ್ರಾಮವನ್ನೇ ಬದಲಾಯಿಸಬಹುದು ನಾವು ಶಿಶುಮಂದಿರದಲ್ಲಿ ಕಲಿಸಿದಂತಹ ಶಿಕ್ಷಣವನ್ನು ಮನೆಯಲ್ಲಿಯೂ ಅಳವಡಿಸಿಕೊಂಡಾಗ ಮಾತ್ರ ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನು ಕೊಡಲು ಸಾಧ್ಯ ಎಂಬುದನ್ನು ಕಥೆಗಳ ಹಾಗೂ ತಮ್ಮ ಅನುಭವಗಳ ಮೂಲಕ ಹಂಚಿಕೊಂಡರು.

ನಮ್ಮ ಶಿಶುಮಂದಿರದ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಆಗಮಿಸಿದ ಶ್ರೀಮತಿ ರೂಪಲೇಖ ಅವರು ನಾವು ಯಾವ ರೀತಿಯಾಗಿ ನಡೆದುಕೊಳ್ಳುತ್ತೇವೆಯೋ, ಅದೇ ರೀತಿಯಾಗಿ ಮಗು ಕೂಡ ನಡೆದುಕೊಳ್ಳುತ್ತದೆ ನಾವು ಒಳ್ಳೆಯ ಕೆಲಸಗಳನ್ನು ಮಾಡಿ ತೋರಿಸಬೇಕು ಅದೇ ರೀತಿ ಯಾವುದೇ ಕೆಲಸವನ್ನು ಮಗು ಮಾಡುತ್ತದೆ ಎನ್ನುವಂತಹ ಧನಾತ್ಮಕ ಚಿಂತನೆಯನ್ನು ಮಗುವಿನಲ್ಲಿ ಬಿತ್ತಬೇಕು ಎನ್ನುವುದನ್ನು ತಮ್ಮ ಅನುಭವಗಳ ಮೂಲಕ ತಿಳಿಸಿದರು. ನಂತರ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಣ್ಣರು ವಿವಿಧ ವೇಷ ಧರಿಸಿ ಬಗೆಬಗೆಯ ನೃತ್ಯಗಳ ಮೂಲಕ ಎಲ್ಲರನ್ನು ರಂಜಿಸಿದರು.


Share news

Related Articles

Leave a Reply

Your email address will not be published. Required fields are marked *

Back to top button