All Kannada Newsಬೆಳ್ತಂಗಡಿಸ್ಥಳೀಯ

ಎನ್​ಸಿಇಆರ್​ಟಿ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದೀಕ್ಷಾ ಬಿ.ಎಸ್

Share news

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದೀಕ್ಷಾ ಬಿ.ಎಸ್ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್​ಸಿಇಆರ್​ಟಿ) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎನ್​ಸಿಇಆರ್​ಟಿ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದವರು ಆರ್​ಐಇ (ರೀಜನಲ್ ಇನ್​ಸ್ಟಿಟ್ಯೂಟ್ ಆಫ್ ಎಜುಕೇಶನ್)ಗಳಲ್ಲಿ ಮೂಲವಿಜ್ಞಾನ ಓದಲು ಅರ್ಹತೆ ಪಡೆಯುತ್ತಾರೆ. ಆರ್​ಐಇ ಮೈಸೂರಿನಲ್ಲಿ ಉನ್ನತ ವ್ಯಾಸಂಗಕ್ಕೆ ದೀಕ್ಷಾ ಆಯ್ಕೆಯಾಗಿದ್ದಾರೆ. ಎಂಎಸ್ಸಿ ಇಡಿ ಮತ್ತು ಬಿಎಸ್ಸಿ ಇಡಿ ಪದವಿಗೆ ಅರ್ಹತೆ ಪಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೀಕ್ಷಾ ಎಂಎಸ್ಸಿ ಇಡಿ ಗಣಿತ ಮತ್ತು ಎಂಎಸ್ಸಿ ಇಡಿ ರಸಾಯನ ಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ(ರ‍್ಯಾಂಕ್) ಸ್ಥಾನ, ಬಿಎಸ್ಸಿ ಇಡಿಯಲ್ಲಿ ರಾಜ್ಯಕ್ಕೆ ಮೊದಲ (ರ‍್ಯಾಂಕ್) ಸ್ಥಾನ ಪಡೆದಿದ್ದಾರೆ.

ದೀಕ್ಷಾ ಅವರು ಉಜಿರೆಯ ಎಸ್​ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕರು ಡಾ.ಶ್ರೀಧರ ಭಟ್ ಉಜಿರೆ ಹಳೇಪೇಟೆಯ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕಿ ವೀಣಾ ಶ್ಯಾನುಭಾಗ ದಂಪತಿಯ ಪುತ್ರಿ ಈ ಹಿಂದೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆದಿದ್ದು, ಇದೀಗ ಮತ್ತೊಂದು ಅತ್ಯುತ್ತಮ ಸಾಧನೆ ಮಾಡಿ ಹೆಮ್ಮ ಪಡುವಂತೆ ಮಾಡಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button