ಪುತ್ತೂರುಸ್ಥಳೀಯ
Trending

ಫೆ. 11 ರಂದು ಬೃಹತ್ ಸಮಾವೇಶಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ರವರ ಆಗಮನದ ಪೂರ್ವಸಿದ್ಧತೆಯ ಕುರಿತು ನರೇಂದ್ರ ಪ.ಪೂ.ಕಾಲೇಜಿನಲ್ಲಿ ಕಾರ್ಯಾಲಯ ಉದ್ಘಾಟನೆ

Share news

ಫೆ. 11 ರಂದು ತೆಂಕಿಲದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ರವರ ಆಗಮನದ ಪೂರ್ವಸಿದ್ಧತೆಯ ಕುರಿತು ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯು ಫೆ. 4 ರಂದು ಅಪರಾಹ್ನ ನರೇಂದ್ರ ಪ.ಪೂ.ಕಾಲೇಜಿನಲ್ಲಿ ಜರುಗಿತು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ರವರು ಕಾರ್ಯಾಲಯವನ್ನು ಉದ್ಘಾಟಿಸಿದರು.

ಕಾಠ್ಯಕ್ರಮದ ಯಶಸ್ಸಿಗಾಗಿ ಅಧಿಕಾರಿಗಳು ಮತ್ತು ಸ್ವಯಂ ಸೇವಕರನ್ನು ಒಳಗೊಂಡಂತಹ ಹಲವು ಸಮಿತಿಗಳನ್ನು ರಚಿಸಲಾಗಿದ್ದು ಅದರಲ್ಲಿ ಮುಖ್ಯವಾಗಿ ಅಧಿಕಾರಿಗಳ ಸಂಪರ್ಕ,ಗಣ್ಯರ ಸಂಪರ್ಕ,ವಸತಿ,ಊಟೋಪಚಾರ,ವಾಹನ ಪಾರ್ಕಿಂಗ್,ವೇದಿಕೆ.ಕುಡಿಯುವ ನೀರು.ಸ್ವಚ್ಛತೆ,ಮಾಧ್ಯಮ.ಪತ್ರಿಕಾ ಪ್ರಚಾರ,ಸೋಶಿಯಲ್ ಮೀಡಿಯಾ ಮುದ್ರಣ,ಬ್ಯಾನರ್ ಮತ್ತು ಪ್ಲೆಕ್ಸ್,ಸ್ಟ್ರಾಡ್ ಹಾಗೂ ವೈದ್ಯಕಿಯ ಸಮಿತಿಗಳೊಂದಿಗೆ ಇಂದು ಪೂರ್ವಭಾವಿ ಸಭೆಯು ಜರುಗಿತು.ಪ್ರಮುಖರಾದ ಕ್ಯಾಂಷ್ಟೋ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಕುಮಾರ್ ಸಮಿತಿಗಳು ಯಾವ ರೀತಿಯಾಗಿ ಕಾರನಿರ್ವಹಿಸಬೇಕೆಂದು ಸಂಪೂರ್ಣ ಮಾಹಿತಿಯನ್ನು ಸಭೆಗೆ ತಿಳಿಸಿದರು.

ಈ ಕಾಠ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ.ಮುರಳಿ ಕೃಷ್ಣ ಹಸಂತಡ್ಕ,ಕ್ಯಾಂಷ್ಟೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಲಿ, ಕ್ಯಾಂಷ್ಟೋ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಕುಮಾರ್, ಕ್ಯಾಂಸ್ಕೋ ಮಾಜಿ ಅಧ್ಯಕ್ಷರಾದ ಸತೀಶ್ಚಂದ್ರ ಮೆಸ್ಕಾಂ ನ ನಿರ್ದೇಶಕರಾದ ಕಿಶೋರ್ ಬೊಟ್ಯಾಡಿ,ಅಪ್ಪಯ್ಯ ಮಣಿಯಾಣಿ,ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶಿವಪ್ರಸಾದ್ ಇ..ಖಜಾಂಚಿಯಾದ ಅಚ್ಯುತ ನಾಯಕ್,ವಿವೇಕಾನಂದ ಪ.ಪೂ.ಕಾಲೇಜಿನ ಅಧ್ಯಕ್ಷರಾದ ರವೀಂದ್ರ ರೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ರವಿನಾರಾಯಣ,ಮುಖ್ಯೋಪಾಧ್ಯಾಯರಾದ ಸತೀಶ್‌ ಕುಮಾರ್ ರೈ,ಬೂಡಿಯಾರು ರಾಧಾಕೃಷ್ಣ ರೈ,ನರೇಂದ್ರ ಪ.ಪೂ.ಕಾಲೇಜಿನ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ,ಸಂಚಾಲಕರಾದ ಸಂತೋಷ ಬಿ..ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್‌ ಉಪಸ್ಥಿತರಿದ್ದರು.


Share news

Related Articles

Leave a Reply

Your email address will not be published. Required fields are marked *

Back to top button