ಮೂಡುಬಿದಿರೆಸ್ಥಳೀಯ
Trending

ಆಳ್ವಾಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ವೈಶಿಷ್ಟ್ಯತೆಗಳು

Share news

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ – 2022 ಡಿಸೆಂಬರ್ 21 ರಿಂದ 27ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ. ವ್ವೈವಿಧ್ಯಮಯ ಪ್ರದರ್ಶನಗಳ ಅಪೂರ್ವ ಸಂಗಮ.

• 2022 ದಶಂಬರ 21ರಿಂದ 27ರವರೆಗೆ ಪೂರ್ವಾಹ್ನ 9.30 ರಿಂದ ರಾತ್ರಿ 9.00 ರವರೆಗೆ ಜನಮನ ತಣಿಸುವ ಅಪೂರ್ವ ಕಾರ್ಯಕ್ರಮಗಳು.

ಕಂಡು ಕೇಳಿರದ 5 ಬೃಹತ್ ಮೇಳಗಳು

ಕೃಷಿಸಿರಿ – ಎ. ಜಿ ಕೊಡ್ಗಿ ಆವರಣದಲ್ಲಿ 12 ಎಕರೆ ವಿಸ್ತಾರದ ಪಾರಂಪರಿಕ ತರಕಾರಿ ತೋಟ.
100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟ. ದೇಶ-ವಿದೇಶಗಳ ಬಾಳೆ, ತೆಂಗು, ಧಾನ್ಯ. 530 ವಿಧ ಭತ್ತ, ವಿವಿಧ ಗೆಡ್ಡೆ ಗೆಣಸುಗಳು, ವಿಶಾಲ ನೈಜ ಪುಷ್ಷಾಂಲಕಾರದಿಂದ ಸುತ್ತುವರಿದ ಕೃಷಿ ಆವರಣ.

ವಿಜ್ಞಾನಮೇಳ – ಪ್ರಾಥಮಿಕದಿಂದ ಸ್ನಾತಕೋತ್ತರವರೆಗಿನ ವಿದ್ಯಾರ್ಥಿಗಳು ಅಗತ್ಯವಾಗಿ ನೋಡಲೇಬೇಕಾದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ.

ಪುಸ್ತಕಮೇಳ – ಪ್ರಾದೇಶಿಕ, ಪ್ರಾಂತೀಯ, ದೇಶಿಯ ಮತ್ತು ಅಂತರಾಷ್ಟ್ರೀಯ ಭಾಷೆಗಳ ಅಸಂಖ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ.

ಕಲಾಮೇಳ – ದೇಶ-ವಿದೇಶಗಳ ಪ್ರತಿಭಾನ್ವಿತ ಕಲಾವಿದರ ಸಂಗಮದ ಚಿತ್ರಕಲೆ, ಶಿಲ್ಪಕಲೆ, ವ್ಯಂಗ್ಯಚಿತ್ರ ಹಾಗೂ ಫೋಟೋಗ್ರಫಿ ರಚನೆ ಮತ್ತು ಪ್ರದರ್ಶನ.

ಆಹಾರೋತ್ಸವ ಮೇಳ – ಸಾಂಪ್ರದಾಯಿಕ ಮತ್ತು ಆಧುನಿಕ ವ್ಯವಿಧ್ಯಮಯ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳ ಮೇಳ.

• ಮೈಮನ ರೋಮಾಂಚನಗೊಳಿಸುವ ಪುಷ್ಪೋದ್ಯಾನ ಮತ್ತು ಹಣ್ಣುಹಂಪಲುಗಳ ಪ್ರದರ್ಶನ.
• ಪ್ರತಿನಿತ್ಯ 5 ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು
ಆಳ್ವಾಸ್ ನುಡಿಸಿರಿ ವೇದಿಕೆ ,ಡಾ. ವಿ. ಎಸ್ ಆಚಾರ್ಯ ವೇದಿಕೆ, ಕೃಷಿಸಿರಿ ವೇದಿಕೆಗಳಲ್ಲಿ ಪೂರ್ವಾಹ್ನ 10.00 ರಿಂದ ರಾತ್ರಿ 6.00 ವರೆಗೆ. • • ಕೆ. ವಿ ಸುಬ್ಬಣ್ಣ ವೇದಿಕೆಯಲ್ಲಿ ಸಂಜೆ 5.30 ರಿಂದ ರಾತ್ರಿ 9.30 ರವರೆಗೆ. • ಕೈಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ಮಳಿಗೆಗಳು.
• 1000ಕ್ಕೂ ಮಿಕ್ಕಿದ ವೈವಿಧ್ಯಮಯ ಮತ್ತು ದಿನವಹಿ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು.
• ಬೇರೆಲ್ಲೂ ದೊರೆಯದ ,ಪ್ರತಿಯೊಬ್ಬರೂ ಕುಟುಂಬ ಸಮೇತ ಅಗತ್ಯವಾಗಿ ನೋಡಲೇಬೇಕಾದ ಜಾಂಬೂರಿ ಉತ್ಸವ.

ಆಬಾಲ ವೃದ್ಧರಾಗಿ ಎಲ್ಲರಿಗೂ ಅಗತ್ಯದ ಮತ್ತು ಅನುಕೂಲದ ಆಕರ್ಷಕ ಸಾಂಸ್ಕೃತಿಕ ಜಾಂಬೂರಿ.


Share news

Related Articles

Leave a Reply

Your email address will not be published. Required fields are marked *

Back to top button