ಮಂಗಳೂರುಲೇಖನ ಸಂಗಮ

60 ವರ್ಷಗಳಿಂದ ಪಾರಂಪರಿಕ ಗಣಪತಿಯನ್ನು ತಯಾರಿಸುತ್ತಿರುವ ಮಂಗಳೂರಿನ ದಾಮೋದರ ಶೆಣೈ

Share news

ಮಂಗಳೂರಿನ ಕಾರ್ ಸ್ಟ್ರೀಟ್ ಬಳಿ ವಾಹನ ಗ್ಯಾರೆಜ್ ಪಕ್ಕ ಒಂದು ಸಣ್ಣ ಅಂಗಡಿಯಿದೆ ಅಲ್ಲಿ ತಮ್ಮ 82 ನೇ ವಯಸ್ಸಿನಲ್ಲೂ ಗಣಪತಿಯ ಮೂರ್ತಿಗಳನ್ನು ಪಾರಂಪರಿಕವಾಗಿ ವಿಭಿನ್ನ ಶೈಲಿಯಲ್ಲಿ ಮಾಡಿ ಸುತ್ತಲೂ ಗಣಪತಿಯ ಮೂರ್ತಿಯ ನಡುವೆ ನಗುತ್ತಿರುವ ಹಿರಿಯರು ದಾಮೋದರ ಶೆಣೈ. ತಾವು ಈಗಲೂ ಅದೇ ಜೀವನೋತ್ಸಾಹದಿಂದ ಚಿತ್ರಗಳನ್ನು ಬಿಡಿಸುವುದನ್ನು ಕೂಡ ಸ್ವತಃ ತಾವೇ ಕಲಿತಿದ್ದಾರೆ ಹಾಗೂ ಮಣ್ಣಿನ ಗಣಪತಿ, ಶಾರದೆ ಸೇರಿದಂತೆ ಹಲವು ಮೂರ್ತಿಗಳನ್ನು ಸುಮಾರು 60 ವರ್ಷಗಳಿಂದ ತಮ್ಮದೇ ಆದ ಪಾರಂಪರಿಕ ಶೈಲಿಯಲ್ಲಿ ತಯಾರಿಸುತ್ತಿದ್ದಾರೆ.

ಸಣ್ಣ ವಯಸ್ಸಿನಿಂದಲೇ ಗಣಪತಿಯನ್ನು ತಯಾರಿಸುವುದರಲ್ಲಿ ಬಹಳ ಆಸಕ್ತಿ. ಶಾಲೆಯಲ್ಲಿರುವಾಗ ಮಣ್ಣನ್ನು ಹೊತ್ತೊಯ್ದು ಡೆಸ್ಕಿನ ಅಡಿಯಲ್ಲಿ ಗಣಪತಿ ತಯಾರಿಸುತ್ತಲೇ ಕಲಿತವರು ಮಹಾಗಣಪತಿಯೇ ನನ್ನ ಗುರು ಎಂದು ಭಕ್ತಿಯಿಂದ ಪ್ರತಿ ವರ್ಷ ಗಣಪತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಉಳಿದ ಗಣಪತಿಗಳಿಗಿಂತ ವಿಶೇಷವೇನೆಂದರೆ ಗಣಪತಿಯ ಮೇಲೆ ತಾವು ನೀಡುವ ಸಣ್ಣ ಸಣ್ಣ ಚುಕ್ಕಿಗಳು (ಚಿಟ್ಟೆ) ಅವುಗಳ ಮೂಲಕ ಅಲಂಕರಿಸಿದ ಗಣಪತಿ ಮೂರ್ತಿಗಳು ಬಹಳ ವಿಶಿಷ್ಟವಾಗಿದೆ.

ಗಣಪತಿಯನ್ನು ತಯಾರಿಸಲು ಸಾಕಷ್ಟು ಪರಿಶ್ರಮ ಅಗತ್ಯ. ಪರಿಸರ ಸ್ನೇಹಿ ಮಣ್ಣಿನಿಂದ ಮೊದಲಿಗೆ ದೇಹದ ಆಕೃತಿಯನ್ನು ಮಾಡಿ ನಂತರ ಉಳಿದ ಭಾಗಗಳನ್ನು ಮಾಡಲಾಗುತ್ತದೆ.82ರ ವಯಸ್ಸಿನಲ್ಲೂ ಛಲ ಬಿಡದೆ ಪ್ರತಿ ವರ್ಷವೂ 50 ರಿಂದ 60 ಗಣಪತಿ ಮೂರ್ತಿಗಳನ್ನು ಯಾರದೇ ಸಹಾಯವಿಲ್ಲದೆ ಮಾಡುತ್ತ ಬಂದಿದ್ದಾರೆ. ಅವರ ಅಂಗಡಿಯೊಳಗೆ ಚೌತಿ ಸಮಯದಲ್ಲಿ ಹೋದರೆ ಅವರು ಮಾಡಿರುವ ವಿಶಿಷ್ಟವಾದ ಗಣಪತಿಗಳನ್ನು ಕಾಣಬಹುದು. ಅವುಗಳ ಮದ್ಯೆ ಕುಳಿತು ಸದಾ ತಮ್ಮಷ್ಟಕ್ಕೆ ಮೂರ್ತಿಗಳ ತಯಾರಿಕೆ ಹಾಗೂ ಚಿತ್ರಕಲೆಯಲ್ಲಿ ಮಗ್ನರಾಗಿರುತ್ತಾರೆ.ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ 60 ವರ್ಷಗಳ ಕಲಾ ಸೇವೆ ನಿಜಕ್ಕೂ ಶ್ಲಾಘನೀಯ.

ಎಲ್ಲಾವನ್ನು ಶರವು ಗಣಪತಿಯೇ ಕಲಿಸಿದ್ದು ಎನ್ನುವ ಅಪರೂಪದ ಭಕ್ತಿ. ಮಾಡುವ ಕಾಯವು ದೇವರಿಗೆ ಸಮರ್ಪಿಸುವ ವ್ಯಕ್ತಿ. ಮಾತ್ರವಲ್ಲದೆ ಅಧ್ಬುತವಾಗಿ ಹಾಡುತ್ತಾರೆ ಅವರು ಹಾಡುತ್ತಾ ಇದ್ದರೆ ಮತ್ತೊಮ್ಮೆ ಕೇಳಬೇಕು ಎಂಬ ಅನುಭವ…ಅವರ ಉತ್ಸಾಹ ನೋಡಿದರೆ ಎಂತವರನ್ನು ನಾಚುವಂತೆ ಮಾಡುತ್ತದೆ. ಅವರ ಜೊತೆ ಮಾತಾಡುವುದು ಅವರ ಅನುಭವದ ಸಾರವನ್ನು ಕೇಳುವುದೇ ಸಂತಸದ ಕ್ಷಣ. ಹಿರಿಯರಿಂದ ಕಲಿಯಬೇಕಾದ ವಿಷಯಗಳು ತುಂಬಾ ಇದೆ. ಪ್ರತಿಯೊಂದು ಹೇಳುವ ಮಾತುಗಳು ಪ್ರೇರಣೆದಾಯಿ. ಗಣಪತಿ ತಯಾರಿಕೆಯ ಅವರ ಕೈಚಳಕ ಎಂಥವರನ್ನೂ ಆಕರ್ಷಿಸುತ್ತದೆ. ನಾವು ಒಮ್ಮೆ ಭೇಟಿ ನೀಡಿ ಅನುಭವಗಳ ಸಾರದೊಂದಿಗೆ ಗಣಪತಿಯ ತಯಾರಿಕೆ ನೋಡಿ, ಖರೀದಿಸಿ ಪ್ರೋತ್ಸಾಹಿಸೋಣ…


Share news

Related Articles

Leave a Reply

Your email address will not be published. Required fields are marked *

Back to top button