ಮಂಗಳೂರುಸ್ಥಳೀಯ

ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿಯ ಕಾರ್ಯಕ್ರಮ ವಿವರ

Share news

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಭಾಗವಹಿಸುವ ಮೊದಲ ಸರಕಾರಿ ಕಾರ್ಯಕ್ರಮಕ್ಕೆ ಕ್ಷಣ ಗಣನೆ ಪ್ರಾರಂಭವಾಗಿದೆ. ಬಂಗಳೂರು ಗೋಲ್ಡ್ ಫಿಂಚ್ ಮೈದಾನದಲ್ಲಿ 3000 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು ಬಳಕ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 100 ಮಂದಿ ಅಧಿಕಾರಿಗಳು, 2 ಸಾವಿರ ಮಂದಿ ಸಿವಿಲ್ ಪೊಲೀಸರು, ಕೆಎಸ್‌ಆರ್‌ಪಿ, ಎಎಸ್ ಎಲ್.ಸಿಎಆರ್, ಕರಾವಳಿ ಭದ್ರತಾ ಪಡೆ, ಆರ್ ಎಎಫ್, ಗರುಡ ಪಡೆ ಸೇರಿದಂತೆ ಒಟ್ಟು ಸಾವಿರ ಪೊಲೀಸರು ಭದ್ರತೆ ಬಗ್ಗೆ ನಿಗಾ ಇರಿಸಿದ್ದಾರೆ.ಕಾರ್ಯಕ್ರಮದ ಭದ್ರತೆಗಾಗಿ ಮೂರು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು ಎರಡು ಕಾರ್ಯಕ್ರಮದಲ್ಲಿ ಪಾಲ್ಗೊಳು ವುದರಿಂದ 30 ಎಕರ ಪ್ರದೇಶದಲ್ಲಿ ಬೃಹತ್‌ ಪಂಡಾ‌ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವ ಎಲ್ಲರಿಗೂ ಕಾಣುವಂತೆ ವೇದಿಕೆಯನ್ನು ನಿರ್ಮಿಸಲಾಗಿದೆ.

ಕಾರ್ಯಕ್ರಮ ವಿವರ :

ಒಟ್ಟು ಮೂರೂವರೆ ಗಂಟೆ ಮಂಗಳೂರಲ್ಲಿ ಮೋದಿ

11.55 : ವಿಶೇಷ ವಿಮಾನದ ಮೂಲಕ ಆಗಮನ

12.55 : ಮಂಗಳೂರು ಏರ್‌ಪೋರ್ಟ್‌

1.20 : ವಿಶೇಷ ಹೆಲಿಕಾಪ್ಟರ್ ಎಸ್‌ಎಂಪಿಎ ಹೆಲಿಪ್ಯಾಡ್

1.30 : ಬಂಗ್ರ ಕೂಳೂರಿನ ಗೋಲ್‌ಫಿಂಚ್ ಮೈದಾನ

2.45 ರ ವರೆಗೆ ಸಮಾವೇಶದಲ್ಲಿ ಭಾಗಿ

2.50 : ರಸ್ತೆ ಮೂಲಕ ಎನ್‌ಎಂಪಿಎ

3 – 4 : ಎಸ್‌ಎಂಪಿಎ ಕಾರ್ಯಕ್ರಮ

4.20 : ಮಂಗಳೂರು ವಿಮಾನ ನಿಲ್ದಾಣ

4.25 : ವಿಶೇಷ ವಿಮಾನ ಮೂಲಕ ದಿಲ್ಲಿಗೆ

ಬೃಹತ್ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದ್ದು, ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಪಾತ್ರವನ್ನು ವಹಿಸಲಿದೆ.


Share news

Related Articles

Leave a Reply

Your email address will not be published. Required fields are marked *

Back to top button