ಪ್ರೇರಣೆಮಂಗಳೂರುಸ್ಥಳೀಯ

ಮಂಗಳೂರಿನ ಅದ್ಭುತ ಕಲೆಗಾರ ಬಿ.ಎಸ್.ಎನ್.ಎಲ್ ಕಛೇರಿ ಕಾವಲುಗಾರ – ದಯಾನಂದ ಪಿ. ಅಂಚನ್

Share news

ಪ್ರತಿಭೆಗೆ ವಯಸ್ಸಿನ ಮೀತಿಯಾಗಲಿ ಮಾಡುವ ಕೆಲಸವಾಗಲಿ ಅಡ್ಡಿಯಾಗುವುದಿಲ್ಲ. ಆಸಕ್ತಿ ಇದ್ದರೆ ಸಾಕು ಸಮಯ ವ್ಯರ್ಥ ಮಾಡದೆ ಸಿಕ್ಕ ಬಿಡುವಿನ ಸಮಯದಲ್ಲಿ ಪ್ರತಿಭೆಯ ಅನಾವರಣ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ನಮ್ಮ ನಡುವೆ ಮಂಗಳೂರಿನ ಬಿ.ಎಸ್.ಎನ್. ಎಲ್ ಕಛೇರಿಯಲ್ಲಿ ಕಾವಲುಗಾರರಾಗಿ ಬಿಡುವಿನ ವೇಳೆಯಲ್ಲಿ ಅಲ್ಲೇ ಮೂಲೆಯಲ್ಲಿ ಖುರ್ಚಿಯಲ್ಲಿ ಕುಳಿತು ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸುತ್ತ, ಗೋಡೆಯಲ್ಲಿ ತಮ್ಮ ಮೊಬೈಲ್ ಮೂಲಕ ಶೇಡೋ ಪ್ಲೇ ಮಾಡುವ ವಿಶಿಷ್ಟ ಕಲಾವಿದ ಹಾಗೇ ಎಲ್ಲಾರಲ್ಲೂ ಪ್ರೀತಿಯಿಂದ ಮಾತನಾಡುವ ಅಪರೂಪದ ವ್ಯಕ್ತಿ ದಯಾನಂದ ಪಿ. ಅಂಚನ್.

ಚಿಕ್ಕದಿರುವಾಗ ತಮ್ಮ ಮನೆಯ ಸಮೀಪದಲ್ಲಿದ್ದ ಗೋವಿಂದ ಪೈ ಅನ್ನುವವರು ಶೇಡೋ ಪ್ಲೇ ಮೂಲಕ ಗೋಡೆಯಲ್ಲಿ ಕೈಚಲನೆ ಬಳಸಿ ಬೆಳಕಿನ ನೆರಳಿನಲ್ಲಿ ಮೂಡಿಸುತ್ತಿದ್ದ ಹಕ್ಕಿಗಳು,ಪ್ರಾಣಿಗಳ, ಮನುಷ್ಯನನ್ನು ನೋಡುತ್ತಾ ನೋಡುತ್ತಾ ತಾವು ನಿಧಾನವಾಗಿ ಆಸಕ್ತಿಯಿಂದ ಸತತ ಪ್ರಯತ್ನ ಪಟ್ಟು ಶೇಡೋ ಪ್ಲೇ ಮೂಲಕ ಗಿಳಿ, ಬಾತುಕೋಳಿ, ಕೊಕ್ಕರೆ, ಮನುಷ್ಯ,ಸಿಂಹ ಹೀಗೆ ಕಲಿತರು ಹಾಗೂ ಮನಸ್ಸಿದ್ದರೆ ಹೇಗೆದರೂ ಕಲಿಯಬಹುದು ತಾವು ಮೊದಲು ಕೆಲಸ ಮಾಡುತ್ತಿದ್ದ ರೈಸ್ ಮಿಲ್ ನಲ್ಲಿ ಬರುತ್ತಿದ್ದ ಧೂಳಿನಲ್ಲೇ ಚಿತ್ರ ಬಿಡಿಸುತ್ತಾ ನಂತರ ಕಾಗದದ ಮೇಲೆ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಅನೇಕ ವ್ಯಕ್ತಿಗಳ ಮುಖದ ಚಿತ್ರಗಳನ್ನು ಬಿಡಿಸಿದ್ದಾರೆ.

ಮಾಡುವ ಕಾಯಕದೊಂದಿಗೆ ಹವ್ಯಾಸವನ್ನು ಬಿಡದೆ ಅನೇಕ ವರ್ಷಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವ ದಯಾನಂದ ಪಿ.ಅಂಚನ್.ವೃತ್ತಿಯಲ್ಲಿ ತಾವು ಮಂಗಳೂರಿನಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿಯಲ್ಲಿ ಬೆಳಗ್ಗೆ ಕಾವಲುಗಾರರು ಆದರೆ ಹವ್ಯಾಸವಾಗಿ ಅಧ್ಬುತವಾಗಿ ಚಿತ್ರಗಳನ್ನು ಬಿಡಿಸುವ ಕಲಾ ಆರಾಧಕರು.ಯಾರು ಆಶ್ಚರ್ಯವೆಂದರೆ ಚಿತ್ರಕಲೆ,ಶೇಡೋ ಪ್ಲೇ ಯಾರಲ್ಲೂ ಕಲಿಯದೆ ತಾವೇ ಸ್ವತಃ ಆಸಕ್ತಿಯಿಂದ ಅನೇಕ ವರ್ಷಗಳ ಪರಿಶ್ರಮದಿಂದ ಕಲಿತುಕೊಂಡು ತಮ್ಮ ಹವ್ಯಾಸವನ್ನು ಉದ್ಯೋಗದ ಜೊತೆಗೆ ಬೆಳೆಸುತ್ತಾ ಅಧ್ಬುತವಾಗಿ ವಿವಿಧ ವ್ಯಕ್ತಿಗಳ,ಹಲವು ಸಾಧಕರ ಮುಖಗಳ ಚಿತ್ರಗಳನ್ನು ಬಿಡಿಸುತ್ತಾ, ಮೊಬೈಲ್ ಬೆಳಕಿನಲ್ಲೇ ಗೋಡೆಗಳ ಮೇಲೆ ಹಕ್ಕಿ,ಹುಲಿ, ಮನುಷ್ಯ ಮಾತಾನಾಡುವುದು ಈ ರೀತಿ ಶೇಡೋ ಪ್ಲೇ ಮಾಡಿ ತೋರಿಸುವ ಸರಳ ವ್ಯಕ್ತಿ ದಯಾನಂದ ಪಿ. ಅಂಚನ್

ಯಾರೇ ಅವರನ್ನು ಮಾತನಾಡಿಸಿ ಅವರ ಕಲೆಯ ಬಗ್ಗೆ ಕೇಳಿದಾಗ ಪ್ರೀತಿಯಿಂದ ಬಿಡಿಸಿದ ಚಿತ್ರಗಳನ್ನು ,ಶೇಡೋ ಪ್ಲೇ ತೋರಿಸಿ ಅಚ್ಚರಿ ಪಡಿಸುತ್ತಾರೆ. ಸಾಧಿಸಲು ಛಲ ಹಾಗೂ ಶ್ರದ್ಧೆ ಇದ್ದರೆ ಸಾಕು. ಸ್ವಂತ ತಾವೇ ಆಸಕ್ತಿಯಿಂದ ಕಲಿತು ಇಂದಿಗೂ ಉಳಿಸಿಕೊಂಡು ಬಂದಿರುವ ಅವರ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಪ್ರೇರಣೆ ನೀಡುವಂತದ್ದು ಹಾಗೂ ಇಂತಹ ಎಲೆಮರೆಯ ಕಾಯಿಯಂತಿರುವ ಅನೇಕರನ್ನು ಗುರುತಿಸಿ ಅವರಿಗೆ ಇನ್ನಷ್ಟು ಪ್ರೋತ್ಸಾಹಿಸೋಣ. ಯಾವಾಗಲಾದರೂ ಬಿ.ಎಸ್.ಎನ್.ಎಲ್ ಮಂಗಳೂರಿನ ಕಛೇರಿಗೆ ಹೋದಾಗ ಅಲ್ಲೇ ಹೊರಗೆ ಕುಳಿತು ಸಮಯ ಸಿಕ್ಕಾಗ ಎಳೆಎಳೆಯಾಗಿ ಚಿತ್ರವನ್ನು ಬಿಡಿಸುತ್ತಾ ಅದರಲ್ಲೇ ಖುಷಿ ಪಡುವ ದಯಾನಂದ ಪಿ. ಅಂಚನ್ ಅವರನ್ನು ಮಾತನಾಡಿಸಲು ಮರೆಯದಿರಿ.


Share news

Related Articles

Leave a Reply

Your email address will not be published. Required fields are marked *

Back to top button