ಮೂಡುಬಿದಿರೆಸ್ಥಳೀಯ
Trending

ಆಳ್ವಾಸ್ ವಿದ್ಯಾಸಂಸ್ಥೆಯಿಂದ ಕ್ರೀಡಾ ಕ್ಷೇತ್ರದ ಸಾಧಕರಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Share news

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕ್ರೀಡಾ ಕ್ಷೇತ್ರದಲ್ಲಿ ಉಚಿತ ಶಿಕ್ಷಣ ಪಡೆಯುವ ಅವಕಾಶ ನೀಡಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

2023-24ನೇ ಸಾಲಿನ ಆಳ್ವಾಸ್ ಪ್ರೌಢಶಾಲೆ (ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ) ಪದವಿಪೂರ್ವ, ಪದವಿ ಹಾಗೂ ಉನ್ನತ ವ್ಯಾಸಂಗದ ತರಗತಿಗಳಿಗೆ ದಾಖಲಾತಿ ಬಯಸುವ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಾಗೂ ಮಾಡಲಿಚ್ಛಿಸುವ ಕ್ರೀಡಾಪಟುಗಳು ಕೂಡಲೇ ತಮ್ಮ ಕ್ರೀಡಾ ಸಾಧನೆ ದಾಖಲೆ, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಸಹಿತ ತಮ್ಮ ಸ್ವವಿವರಗಳನ್ನು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡದಿರೆ, ದಕ್ಷಿಣ ಕನ್ನಡ – 574227 ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-02-2023

ಆಯ್ಕೆ ನಡೆಯುವ ಕ್ರೀಡೆಗಳು :

ಪ್ರಾಥಮಿಕ ಮತ್ತು ಪ್ರೌಢಶಾಲೆ (ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ) : ಅಥ್ಲೆಟಿಕ್ಸ್

ಪಿಯುಸಿ: ಅಥ್ಲೆಟಿಕ್ಸ್, ಕಬಡ್ಡಿ, ಖೋ ಖೋ, ವಾಅಬಾಲ್, ಬಾಲ್ ಬ್ಯಾಡ್ಮಿಂಟನ್ ಪದವಿ ಮತ್ತು ಸ್ನಾತಕೋತ್ತರ: ಅಥ್ಲೆಟಿಕ್ಸ್, ಕಬಡ್ಡಿ, ಖೋ ಖೋ, ಕುಸ್ತಿ, ವೈಟ್ ಅಫ್ಟಿಂಗ್, ವಾಅಬಾಲ್, ಹ್ಯಾಂಡ್ ಬಾಲ್, ಸಾಫ್ಟ್ ಬಾಲ್, ಪ್ರೋಬಾಲ್, ಬಾಲ್ ಬ್ಯಾಡ್ಮಿಂಟನ್

ಈ ಮೇಲಿನ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು.
ಡಾ। ಎಂ. ಮೋಹನ್ ಆಳ್ವ
9620387666 8073037640 | 9742109257


Share news

Related Articles

Leave a Reply

Your email address will not be published. Required fields are marked *

Back to top button