ಮೂಡುಬಿದಿರೆ

ಯಕ್ಷಗಾನ ಚೆಂಡೆಯ ಮೂಲಕ ದಾಖಲೆ ಬರೆದ ಕೌಶಿಕ್ ರಾವ್

Share news

ಮೂಡುಬಿದಿರೆಯ ಕೌಶಿಕ್ ರಾವ್ ಟಿ.ಜೆ. ಯಕ್ಷಗಾನ ಚೆಂಡೆಯಲ್ಲಿ ಒಂದು ನಿಮಿಷಕ್ಕೆ 192 ಬಾರಿ ತರಿಕಿಟತಕ ಎಂಬ ಏಕತಾಳದ ಉರುಳಿಕೆಯನ್ನು ನುಡಿಸುವ ಮೂಲಕ ಪುತ್ತಿಗೆ ‘ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್’ ಪುಟ ಸೇರಿದ್ದಾರೆ. ಇದೇ ಮೊದಲ ಬಾರಿಗೆ ಯಕ್ಷಗಾನ ಚೆಂಡೆ ವಾದನದಲ್ಲಿ ವಿಶಿಷ್ಟವಾದ ದಾಖಲೆ ಸೃಷ್ಟಿಸಿ ಸಾಧನೆ ಮಾಡಿದ್ದಾರೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ‘ಶ್ರೀ ಜ್ಞಾನಶಕ್ತಿ ಪಾವಂಜೆ ಮೇಳದ ಪ್ರಧಾನ ಚೆಂಡೆವಾದಕರಾದ ಕೌಶಿಕ್ ಅವರು ಚೆಂಡೆಯಲ್ಲಿ ತರಿಕಿಟತಕವನ್ನು 192 ಬಾರಿ (192X6=1152 ಬೀಟ್ಸ್) ಬಾರಿಸಿದ್ದ ಒಂದೇ ತಾಳವನ್ನು ಯಾವುದೇ ಅಕ್ಷರ ತಪ್ಪದಂತೆ ನುಡಿಸಿದ ವಿಡಿಯೋವನ್ನು ಜೆಮ್‌ಷೆಡ್‌ಪುರದಲ್ಲಿರುವ ಐಡಬ್ಲ್ಯುಆರ್ ಫೌಂಡೇಶನ್‌ಗೆ ಕಳುಹಿಸಲಾಗಿತ್ತು. ಈ ವಿಡಿಯೋದ ಸಾಚಾತನವನ್ನು ಪಕ್ಕವಾದ್ಯ ಸಾಧಕರ ಮೂಲಕ ಪರೀಕ್ಷಿಸಿದ್ದು,ಇಬ್ಬರು ತೀರ್ಪುಗಾರರ ಪರಿಶೀಲನೆ ಬಳಿಕ ಅವರ ಶಿಫಾರಸು ಆಧರಿಸಿ ಮಾನ್ಯತೆ ನೀಡಲಾಗಿದೆ.

ಯಕ್ಷಗಾನದ ಹಿಮ್ಮೇಳದಲ್ಲಿ ಬಳಸುವ ಚೆಂಡೆಯನ್ನು ವಿಶ್ವಾದ್ಯಂತ ಪರಿಚಯಿಸುವ ಇನ್ನೂ ದಾಖಲೆಗಳನ್ನು ನಿರ್ಮಿಸುವ ಅಭಿಲಾಷೆಯೊಂದಿಗೆ ಯಕ್ಷಗಾನ ರಂಗದಲ್ಲಿ ಹೊಸತೊಂದು ಪ್ರಯತ್ನಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.


Share news

Leave a Reply

Your email address will not be published. Required fields are marked *

Back to top button