ಪುತ್ತೂರುಸ್ಥಳೀಯ

ಪುಟಾಣಿಗಳಲ್ಲಿ ರಾಷ್ಟ್ರ ಜಾಗೃತಿ ಮೂಡಿಸಲು ವಿಶಿಷ್ಟವಾಗಿ ಅಮೃತ ಮಹೋತ್ಸವ ಆಚರಿಸಿದ ನಿವೇದಿತಾ ಶಿಶು ಮಂದಿರ

Share news

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವನ್ನು ಎಲ್ಲೇಡೆ ಆಚರಿಸುತ್ತಿರುವ ಸುಸಂದರ್ಭದಲ್ಲಿ ದೇಶ ಭಕ್ತಿಯನ್ನು ಪುಟ್ಟ ಪುಟ್ಟ ಮಕ್ಕಳಲ್ಲಿ ಜಾಗೃತಗೊಳಿಸಲು, ಸ್ವಾತಂತ್ರ್ಯದ ಹಿಂದಿರುವ ಸಾವಿರಾರು ಜನರ ತ್ಯಾಗ, ಬಲಿದಾನಗಳನ್ನು ಸ್ಮರಿಸಲು, ಪುತ್ತೂರಿನ ನೆಹರೂ ನಗರದಲ್ಲಿರುವ ನಿವೇದಿತಾ ಶಿಶು ಮಂದಿರದಲ್ಲಿ ವಿಶಿಷ್ಟವಾದ ರೀತಿಯಲ್ಲಿ ಅಮೃತ ಮಹೋತ್ಸವನ್ನು ಆಚರಿಸಲಾಯಿತು.

ನಿವೇದಿತಾ ಶಿಶುಮಂದಿರದ ಪುಟಾಣಿಗಳು ಝಾನ್ಸಿ ರಾಣಿ, ಲಕ್ಷ್ಮೀಬಾಯಿ, ಶಿವಾಜಿ, ಸುಭಾಷ್, ಚಂದ್ರ ಬೋಸ್, ಗಾಂಧೀಜಿ ಹೀಗೆ ಅನೇಕ ದೇಶಭಕ್ತರ ವೇಷವನ್ನು ಧರಿಸಿ ಧ್ವಜವನ್ನು ಹಿಡಿದು ಸಂಭ್ರಮಿಸಿದರು ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆಗೈದರು. ಪ್ರತಿಯೊಬ್ಬರು ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ವೀರರ ನೆನಪುಗಳೊಂದಿಗೆ ಅವರ ವೇಷ ತೊಟ್ಟ ಪುಟಾಣಿಗಳು ಸ್ವಾತಂತ್ರ್ಯ ಹೋರಾಟಗಾರರ ಪ್ರತಿ ರೂಪದಂತೆ ಅವರೇ ಎದ್ದುಬಂದು ಮತ್ತೋಮ್ಮೆ ಸ್ವಾತಂತ್ರ್ಯದ ದಿನಗಳನ್ನು ಮೆಲುಕು ಹಾಕಲು ಸಾಧ್ಯವಾಯಿತು. ಮಕ್ಕಳು ವೇಷ ತೊಟ್ಟು ಖುಷಿಯಿಂದ ಕುಣಿದರು. ಪೋಷಕರ ಕಣ್ಣಿಗೆ ಹಬ್ಬವಾಗಿತ್ತು.

ಈ ವಿಶಿಷ್ಟ ಕಾರ್ಯಕ್ರಮದಲ್ಲಿ ನಿವೇದಿತಾ ಶಿಶುಮಂದಿರದ ಅಧ್ಯಕ್ಷರಾದ ಲಕ್ಷ್ಮೀ ವಿಜಿ ಭಟ್ ಹಾಗೂ ಮಾತಾಜಿ ಜ್ಯೋತಿ, ಅನೇಕ ಪೋಷಕರು ಪುಟಾಣಿಗಳು ಸೇರಿದಂತೆ ಎಲ್ಲರೂ ರಾಷ್ಟ್ರಗೀತೆಯನ್ನು ಹಾಡಿದರು ಅನೇಕ ದೇಶಭಕ್ತರ ಘೋಷಣೆಯನ್ನು ಕೂಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತೆತ್ತ ಅನೇಕ ವೀರರನ್ನು ನೆನಪಿಸಿಕೊಳ್ಳಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರ ಧ್ವಜವನ್ನು ಜೋಪಾನವಾಗಿ ಇಡುವುದರ ಕುರಿತಾಗಿ ಪೋಷಕರಿಗೆ ಮಾಹಿತಿ ನೀಡಲಾಯಿತು, ಹೀಗೆ ಮತ್ತೋಮ್ಮೆ ಸ್ವಾತಂತ್ರ್ಯದ ಆ ದಿನಗಳೊಂದಿಗೆ ಅಮೃತ ಮಹೋತ್ಸವ ಆಚರಿಸಲಾಯಿತು.


Share news

Related Articles

Leave a Reply

Your email address will not be published. Required fields are marked *

Back to top button