ಪುತ್ತೂರುಸ್ಥಳೀಯ
Trending

ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ 5ನೇ ಬೃಹತ್ ಕೃಷಿ ಮೇಳ ಹಾಗೂ ಕನಸಿನ ಮನೆ

Share news

ದಕ್ಷಿಣ ಕನ್ನಡದ ಕೃಷಿಕರಿಗಾಗಿ ಕ್ಯಾಂಪ್ಕೋ ನಿಯಮಿತ, ಮಂಗಳೂರು ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜು ಓಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಪುತ್ತೂರು ಇವರ ಆಶ್ರಯದಲ್ಲಿ ಫೆಬ್ರುವರಿ 10 ರಿಂದ 12ರವರೆಗೆ ಬೃಹತ್ ಪ್ರಮಾಣದ 5ನೇ ಕೃಷಿಯಂತ್ರ ಮೇಳ ಮತ್ತು ಕನಸಿನ ಮನೆ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ &ಟೆಕ್ನಾಲಜಿಯ ಆವರಣ, ಪುತ್ತೂರಿನಲ್ಲಿ ನಡೆಯಲಿದೆ.

ಯಂತ್ರ ಮೇಳದ ವೈಶಿಷ್ಟ್ಯತೆಗಳು :

  • ಡ್ರೋನ್ ತಂತ್ರಜ್ಞಾನ ಬಳಸಿ ಔಷಧಿ ಸಿಂಪಡಣೆಯ ಪ್ರಾತ್ಯಕ್ಷಿಕೆ.
  • ಅಡಿಕೆ ಕೊಯ್ದು ಮತ್ತು ಔಷಧಿ ಸಿಂಪಡಣೆಗೆ ಯೋಗ್ಯ ಕಾರ್ಬನ್ ಫೈಬ‌ ದೋಟಿಯ ಪ್ರಾತ್ಯಕ್ಷಿಕೆ ಹಾಗೂ ಮಾರಾಟ.
  • ಜಲಕೃಷಿ ವಿಧಾನದ ಸಮಗ್ರ ಪರಿಚಯ.
  • ಬ್ಯಾಟರಿ ಚಾಲಿತ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ. ಕೃಷಿಯಲ್ಲಿ ಸಾವಯವ ಗೊಬ್ಬರದ ಬಳಕೆಯ ಬಗ್ಗೆ ಮಾಹಿತಿ.
  • ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಸಮಗ್ರ ಮಾಹಿತಿ, * ನೂತನವಾಗಿ ಆವಿಷ್ಕಾರಗೊಂಡ ಹೈನುಗಾರಿಕಾ ತಂತ್ರಜ್ಞಾನ ಮತ್ತು ಪರಿಕರಗಳ ಪ್ರದರ್ಶನ.
  • ಸಾವಯವ ಕೃಷಿ ಉತ್ಪನ್ನಗಳ ಮಳಿಗೆಗಳು,

ಕನಸಿನ ಮನೆಯ ವೈಶಿಷ್ಟ್ಯಗಳು :

  • ಮಿತ ವೆಚ್ಚದ ಮನೆಯ ಮಾದರಿಯ ಪ್ರದರ್ಶನ.
  • ಕಟ್ಟಡ ನಿರ್ಮಾಣದ ತಾಂತ್ರಿಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು.
  • ಕಟ್ಟಡ ನಿರ್ಮಾಣದಲ್ಲಿನ ಹೊಸ ತಂತ್ರಜ್ಞಾನ ಹಾಗೂ ಸವಲತ್ತುಗಳ ಬಗೆಗೆ ಅರಿವು ಮೂಡಿಸುವುದು.

ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಹಾಗೂ ಬೆಳೆಯಾಗಿ ಔಷಧೀಯ ಸಸ್ಯಗಳು,ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ ಹೀಗೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಯಲಿದೆ.


Share news

Related Articles

Leave a Reply

Your email address will not be published. Required fields are marked *

Back to top button