ಪುತ್ತೂರುಸ್ಥಳೀಯ
Trending

ಹನುಮಗಿರಿಯಲ್ಲಿ ಫೆ.11ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತ ಮಾತಾ ಮಂದಿರ ಉದ್ಘಾಟನೆ

Share news

ಪುತ್ತೂರು ತಾಲೂಕಿನ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಪಕ್ಕದಲ್ಲೇ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾದ ಭಾರತ ಮಾತಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಫೆ.11ರಂದು ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ.

ಫೆ.11ರಂದು ಮಧ್ಯಾಹ್ನ 1.25ಕ್ಕೆ ಕಣ್ಣೂರು ಅಂತಾರಾಷ್ಡ್ರೀಯ ವಿಮಾನ ನಿಲ್ದಾಣದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಹೆಲಿಕಾಪ್ಟರ್​ನಲ್ಲಿ ಆಗಮಿಸಲಿದ್ದು, ಮಧ್ಯಾನ 1.50ಕ್ಕೆ ಈಶ್ವರಮಂಗಲ ಗಜಾನನ ಶಾಲೆಯ ಮೈದಾನದಲ್ಲಿ ಇಳಿಯಲಿದ್ದಾರೆ. ಬಳಿಕ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಲಿದ್ದು, ನಂತರ ಅಮರಗಿರಿಗೆ ಆಗಮಿಸಿ ದೀಪಪ್ರಜ್ವಲ ಮಾಡಿ, ಭಾರತ ಮಾತೆ ಪ್ರತಿಮೆ, ಅಮರ ಜವಾನ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸಂದರ್ಶಕರ ಪುಸ್ತಕದಲ್ಲಿ ಅನಿಸಿಕೆ ಬರೆದು ಸಹಿ ಮಾಡಲಿದ್ದಾರೆ. ಇದಾದ ಬಳಿಕ ಸಂದೇಶವನ್ನು ನೀಡಿ ಪುತ್ತೂರಿಗೆ ತೆರಳಲಿದ್ದಾರೆ.

ಕನ್ಯಾಕುಮಾರಿ ಬಿಟ್ಟರೆ ಭಾರತ ಮಾತೆಯ ಎರಡನೇ ಮಂದಿರವಾಗಿದ್ದು, ಇಲ್ಲಿ ಭಾರತ ಮಾತೆಯ ವಿಗ್ರಹ, ಜೈ ಜವಾನ್- ಜೈ ಕಿಸಾನ್ ಘೋಷಣೆಗೆ ಪೂರಕವಾಗಿ ಯೋಧ ಹಾಗೂ ರೈತನ ಪ್ರತಿಮೆಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಚಳವಳಿ ಮಾಡಿದ ವೀರರ ಚಿತ್ರಗಳು ಇರಲಿವೆ. ಮಂದಿರದ ಹೊರಗೆ ಕಲ್ಲಿನಿಂದ ಮಾಡಿದ ಯೋಧನ ಕೈಯಲ್ಲಿ ತ್ರಿವರ್ಣ ರಾಷ್ಟ್ರಧ್ವಜ ಹಾರಾಡಲಿದೆ. ಹೀಗೆ ಭವ್ಯವಾದ ಅಮರಗಿರಿ ಉದ್ಘಾಟನೆಗೊಳ್ಳಲು ಸಿದ್ಧವಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button