ರಾಷ್ಟ್ರೀಯ

ಭಾರತೀಯ ಸೇನೆಯಿಂದ ಅಮರನಾಥ ಪ್ರವಾಹದಲ್ಲಿ ಸಿಲುಕಿಕೊಂಡ 15,000 ಮಂದಿಯ ರಕ್ಷಣೆ 40 ಮಂದಿ ನಾಪತ್ತೆ

Share news

ಅಮರನಾಥ ಗುಹೆಯ ಬಳಿ ಸಂಭವಿಸಿದ ಪ್ರವಾಹ ಹಾಗೂ ಭಾರೀ ಮಳೆಯಿಂದ ಸಂಕಷ್ಟದಲ್ಲಿ ಸಿಲುಕಿಕೊಂಡ ಮಂದಿಯನ್ನು ರಕ್ಷಿಸಲು ಭಾರತಿಯ ಎನ್ .ಡಿ.ಆರ್.ಎಫ್ , ಸೇನೆ , ಬಿ ಎಸ್ ಎಫ್, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಸತತ ಕಾರ್ಯಾಚರಣೆ ನಡೆಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗಾಯಾಳುಗಳನ್ನು ಶೀಘ್ರದಲ್ಲಿ ಸಾಗಿಸಲು ಎಂಐ -17 ಕಾಪ್ಟರ್ ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯ ಮುಂದುವರಿಸಿದೆ.

ಸೇನೆಯ ಕಾರ್ಯಾಚರಣೆ ಮೂಲಕ ಸುಮಾರು 15,000 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಹಾಗೂ ಘಟನೆಯಿಂದ ಬಲಿಯಾದವರ ಸಂಖ್ಯೆ 16ಕ್ಕೆ ಏರಿದೆ. 40 ಮಂದಿಯು ನಾಪತ್ತೆಯಾಗಿದ್ದು ಅವರನ್ನು ಹುಡುಕುವ ಕಾರ್ಯ ನಡೆಯುತ್ತಿದೆ 25 ಮಂದಿ ಗಾಯಾಗೊಂಡಿದ್ದಾರೆ. ಪ್ರವಾಹಕ್ಕೆ ಅಲ್ಲಿನ ಟೆಂಟ್ ಗಳು ಎಲ್ಲಾವು ಕೊಚ್ಚಿಕೊಂಡು ಹೋಗಿದ್ದು ಸಾಕಷ್ಟು ಪ್ರಮಾಣದಲ್ಲಿ ಅವಘಡ ಸಂಭವಿಸಿದೆ.

ಅಮರನಾಥದಲ್ಲಿ ಮೇಘಸ್ಫೋಟ ಸಂಭವಿಸಿಲ್ಲ, ಭಾರೀ ಮಳೆಯೇ ಕಾರಣ ಹಾಗೂ ಗುಹೆಯ ಸುತ್ತಮುತ್ತಲ ಪ್ರದೇಶದಲ್ಲಿ 3.1 ಸೆಂ.ಮೀನಷ್ಟುಮಳೆ ಸುರಿದಿದೆ. ಒಂದು ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 10 ಸೆಂ.ಮೀ. ಮಳೆ ಸುರಿದರೆ ಆಗ ಮಾತ್ರವೇ ಅದನ್ನು ಮೇಘಸ್ಫೋಟವೆಂದು ಪರಿಗಣಿಸಲಾಗುವುದು ಎಂದು ಭಾರತಿಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button