ರಾಷ್ಟ್ರೀಯ

ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ನಿಷೇಧ : ನಿತಿನ್ ಗಡ್ಕರಿ

Share news

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ನಿಷೇಧಿಸುವ ಕುರಿತು ಮಾತಾನಾಡಿದ್ದರೆ.ಕಾರ್ಯಕ್ರಮ ಒಂದರಲ್ಲಿ ಮಾತಾನಾಡಿದ ಅವರು ಪರಿಸರಕ್ಕೆ ಹಾನಿಯಾಗದಂತೆ ಮುಂದಿನ ದಿನಗಳಲ್ಲಿ ಬಯೋಇಥೆನಾಲ್ ಬಳಕೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು. ಮಹಾರಾಷ್ಟ್ರದ ಅಕೋಲಾದಲ್ಲಿ ಪಂಜಾಬ್‌ರಾವ್ ದೇಶಮುಖ ಕೃಷಿ ವಿದ್ಯಾಪೀಠದಿಂದ ಗಡ್ಕರಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿಯನ್ನು ನೀಡಲಾಯಿತು ಈ ಸಂದರ್ಭದಲ್ಲಿ ಅವರು ಈ ವಿಷಯಗಳನ್ನು ಹೇಳಿದ್ದಾರೆ. ರೈತರು ಭವಿಷ್ಯದಲ್ಲಿ ಇಂಧನ ಪೂರೈಕೆದಾರರಾಗಿಯೂ ಕೊಡುಗೆ ನೀಡಬಹುದು ಎಂದು ಗಡ್ಕರಿ ಹೇಳಿದರು.ಇದರಿಂದ ರೈತರಿಗೂ ಸಾಕಷ್ಟು ಪ್ರಮಾಣದಲ್ಲಿ ಲಾಭವಾಗಲಿದೆ.

ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆ ನಡುವೆ ನಿತಿನ್ ಗಡ್ಕರಿ ಕಾರ್ಯಕ್ರಮವೊಂದರಲ್ಲಿ ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ನಿಷೇಧವಾಗಲಿದೆ ಎಂದಿದ್ದಾರೆ. ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಬಯೋಇಥೆನಾಲ್ ಬಳಕೆ ಹೆಚ್ಚಿಸಿ ಹಸಿರು ಜಲಜನಕವನ್ನು ಪೆಟ್ರೋಲ್ ಗೆ ಪರ್ಯಾಯವಾಗಿ ಬಳಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯಿಂದ ಪರಿಸರಕ್ಕೂ ಸಾಕಷ್ಟು ಹಾನಿಯಾಗಿದ್ದು ವಾಯುಮಾಲಿನ್ಯ ಕೂಡ ನಗರ ಪ್ರದೇಶಗಳಲ್ಲಿ ಹೆಚ್ಚಿದೆ ಹೀಗಾಗಿ ಹಸಿರು ಜಲಜನಕವನ್ನು ಹಾಗೂ ಬಯೋಇಥೆನಾಲ್ ಮೂಲಕ ವಾಹನಗಳು ಚಲಿಸುವಂತೆ ಮಾಡಿ ಪೆಟ್ರೋಲ್, ಡೀಸೆಲ್ ಗಳನ್ನು ನಿಷೇಧಿಸುವ ಯೋಜನೆಯನ್ನು ವಿದರ್ಭ ಜಿಲ್ಲೆಯ ಉದಾಹರಣೆಯೊಂದಿಗೆ ನಿತಿನ್ ಗಡ್ಕರಿ ತಿಳಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button