ರಾಷ್ಟ್ರೀಯ
Trending

ನೇಪಾಳದಿಂದ ಅಯೋಧ್ಯೆಗೆ ತರಲಾದ 2 ಅಪರೂಪದ ಸಾಲಿಗ್ರಾಮ ಶಿಲೆಗಳು

Share news

ನೇಪಾಳದಿಂದ ಉತ್ತರಪ್ರದೇಶದ ಅಯೋಧ್ಯೆ ನಿರ್ಮಾಣಕ್ಕೆ ಎರಡು ಅತ್ಯಪರೂಪದ ಸಾಲಿಗ್ರಾಮ ಶಿಲೆಗಳು ಬಂದು ತಲುಪಿದ್ದು, ಈ ಶಿಲೆಯಿಂದ ಭಗವಾನ್ ಶ್ರೀರಾಮ ಮತ್ತು ಜಾನಕಿ ದೇವಿಯ ವಿಗ್ರಹ ಕೆತ್ತಲಾಗುವುದು. ವಿಶಿಷ್ಟವಾದ ರೂಪದ ಸಾಲಿಗ್ರಾಮ ಶಿಲೆಯನ್ನು ನೇಪಾಳದಿಂದ ವಿಶ್ವಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ಅವರ ನೇತೃತ್ವದಲ್ಲಿ ಬೃಹತ್ ಟ್ರಕ್ ನಲ್ಲಿ ಅಯೋಧ್ಯೆಗೆ ತರಲಾಗಿದೆ.

ನೇಪಾಳದ ಮುಸ್ತಾಂಗ್ ಜಿಲ್ಲೆಯ ಕಾಳಿ ಗಂಡಕಿ ನದಿಯಲ್ಲಿ ಮಾತ್ರ ಈ ಸಾಲಿಗ್ರಾಮ ಶಿಲೆ ಲಭ್ಯವಿದ್ದು, ಇವುಗಳನ್ನು ಸೀತಾಮಾತೆ ಜನ್ಮಸ್ಥಳವಾದ ಜಾನಕಿಪುರದಿಂದ ಅಯೋಧ್ಯೆಗೆ ಎರಡು ಟ್ರಕ್ ಗಳ ಮೂಲಕ ತರಲಾಗಿದೆ. 6 ಕೋಟಿ ವರ್ಷಗಳ ಇತಿಹಾಸವಿರುವ 26 ಮತ್ತು 14 ಟನ್ ಇರುವ ಶಿಲೆ ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆ ಪಡೆದಿದೆ.


Share news

Related Articles

Leave a Reply

Your email address will not be published. Required fields are marked *

Back to top button