ರಾಷ್ಟ್ರೀಯ
Trending

ಭಾರತದ ಬಾಸ್ಮತಿ, ಬಾಸ್ಮತಿಯೇತರ ಅಕ್ಕಿಯ ವಿದೇಶಿ ರಫ್ತಿನಲ್ಲಿ ಶೇ.7.37 ರಷ್ಟು ಏರಿಕೆ

Share news

ಭಾರತದ ಬಾಸ್ಮತಿ ಹಾಗೂ ಬಾಸ್ಮತಿಯೇತರ ಅಕ್ಕಿ ರಫ್ತಿನ ಅಂಕಿ ಅಂಶಗಳ ಪ್ರಕಾರ, ಸಾಗಣೆಯ ಮೇಲಿನ ನಿರ್ಬಂಧಗಳಿದ್ದರೂ ಅದನ್ನು ಹೊರತು ಪಡಿಸಿ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತವು ಬಾಸ್ಮತಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿ ರಫ್ತು ಶೇ.7.37 ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ಕೆಲವು ಬಗೆಯ ಅಕ್ಕಿಯ ರಫ್ತಿನ ಮೇಲೆ ನಿರ್ಬಂಧ ಇದ್ದರೂ, ಒಟ್ಟಾರೆ ರಫ್ತಿನ ಪ್ರಮಾಣ ಹೆಚ್ಚಾಗಿದೆ. ಈವರೆಗಿನ ರಫ್ತುಗಳ ಪೈಕಿ ಏರಿಕೆ ಕಂಡ ಬಾಸ್ಮತಿ ಅಕ್ಕಿ 2022-23ರ ಆರ್ಥಿಕ ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 24.97 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕೇವಲ 21.59 ಲಕ್ಷ ಟನ್‌ಗಳಷ್ಟು ರಫ್ತು ಮಾಡಲಾಗಿತ್ತು. ಎಂದು ಅಖಿಲ ಭಾರತ ರಫ್ತುದಾರರ ಸಂಘದ ಮಾಜಿ ಅಧ್ಯಕ್ಷ ವಿಜಯ್ ಸೇಥಿಯಾ ಪಿಟಿಐಗೆ ತಿಳಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button