ರಾಷ್ಟ್ರೀಯ
Trending

ದೇಶದ ಅಭಿವೃದ್ಧಿ ಮತ್ತು ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಲು 3000 ಕಿ‌.ಮೀ ಸೈಕಲಿನಲ್ಲಿ ಸಂಚರಿಸಿದ 73 ವರ್ಷದ ಡಾ.ಕಿರಣ್‌ ಸೇಥ್‌

Share news

73 ವರ್ಷದ ಪದ್ಮಶ್ರೀ ಪುರಸ್ಕೃತ ಡಾ.ಕಿರಣ್‌ ಸೇಥ್‌ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್‌ನಲ್ಲಿ ದೇಶದ ಅಭಿವೃದ್ಧಿ ಮತ್ತು ಸಂಸ್ಕೃತಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ಯಾತ್ರೆ ಮಾಡಿದ್ದು, ಆಗಸ್ಟ್ 15ರಂದು ಶ್ರೀನಗರದಿಂದ ಸೈಕಲ್‌ ಯಾತ್ರೆ ಪ್ರಾರಂಭಿಸಿ ಈಗಾಗಲೇ 3,000 ಕಿ.ಮೀ. ಸಂಚರಿಸಿ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದಾರೆ.

ಮಕ್ಕಳಿಗೆ ಸಂಗೀತ, ಕಲೆ, ಜಾನಪದ, ನಾಟಕಗಳು ಸೇರಿದಂತೆ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು, ಅದರ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಬೈಸಿಕಲ್‌ ಪ್ರಯಾಣ ಬೆಳೆಸಿ ಮಾರ್ಗದಲ್ಲಿ ಸಿಗುವ ಶಾಲಾ-ಕಾಲೇಜಿನ ವಿದ್ಯಾರ್ಥಿ, ಸಿಬ್ಬಂದಿ, ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಮಂತ್ರಿಗಳು ಸೇರಿದಂತೆ ದಾನಿಗಳನ್ನು ಭೇಟಿ ಮಾಡಿ ಜಾಗೃತಿ ಮೂಡಿಸುತ್ತಾ ತಮ್ಮ 73ನೇ ವಯಸ್ಸಿನಲ್ಲೂ ಛಲ ಬಿಡದೆ ಮುಂದೆ ಸಾಗುತ್ತಿದ್ದರೆ. ಜ.5 ರವರೆಗೆ ಬೆಂಗಳೂರು ನಗರದಲ್ಲಿ ಇರಲಿದ್ದು, ನಂತರ ಮುಂದೆ ಕನ್ಯಾಕುಮಾರಿ ತನಕ ತಮ್ಮ ಪ್ರಯಾಣ ಬೆಳೆಸಲಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button