ರಾಷ್ಟ್ರೀಯ

ಆಗಸ್ಟ್ 7 ರಂದು 8ನೇ ರಾಷ್ಟ್ರೀಯ ಕೈಮಗ್ಗ ದಿನ ಆಚರಣೆ

Share news

1905 ರಲ್ಲಿ ಪ್ರಾರಂಭವಾದ ಸ್ವದೇಶಿ ಆಂದೋಲನದ ನೆನಪಿಗಾಗಿ 2015ರಲ್ಲಿ ಆಗಸ್ಟ್ 7 ಅನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿತು. ಸ್ವದೇಶಿ ಆಂದೋಲನ ವಿದೇಶಿ ನಿರ್ಮಿತ ಉಡುಪುಗಳ ಬದಲಿಗೆ ಸ್ಥಳೀಯ ಸ್ವದೇಶಿ ಕೈಯಿಂದ ನೇಯ್ದ ಬಟ್ಟೆಗಳನ್ನು ಧರಿಸಲು ಭಾರತೀಯರನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಹೀಗಾಗಿ ಆ ದಿನಗಳ ನೆನಪಿಗಾಗಿ ಮತ್ತು ಕೈಮಗ್ಗದ ಉಡುಪುಗಳನ್ನು ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಕೈಮಗ್ಗ ದಿನ ಆಚರಿಸಲಿದೆ.

“ಕೈಮಗ್ಗವು ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಮತ್ತು ಜೀವನೋಪಾಯದ ಪ್ರಮುಖ ಮೂಲವಾಗಿದೆ. ಜವಳಿ ಸಚಿವಾಲಯವು 8 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು (National Handloom Day) 7 ಆಗಸ್ಟ್ 2022 ರಂದು ಆಯೋಜಿಸುತ್ತದೆ” ಎಂದು ಜವಳಿ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಹೇಳಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ತೆಲಂಗಾಣದಲ್ಲಿ ಕೈಮಗ್ಗ ಮತ್ತು ಪವರ್ ಲೂಮ್ ನೇಕಾರರಿಗೆ ಜೀವ ವಿಮಾ ಯೋಜನೆಯನ್ನು ಘೋಷಿಸಿದರು. ಇದು ನೇಕಾರರನ್ನು ಪ್ರೋತ್ಸಾಹಿಸಲು ಅವರಿಗೆ ಇನ್ನಷ್ಟು ರಕ್ಷಣೆ ನೀಡಲು ಸಹಾಯವಾಗಲಿದೆ.

ಜವಳಿ ಸಚಿವಾಲಯವು ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕೈಮಗ್ಗ ಎಕ್ಸ್‌ಪೋದೊಂದಿಗೆ ಕಳೆದ ವರ್ಷದ ಆಚರಣೆಯನ್ನು ದೆಹಲಿಯ ದಿಲ್ಲಿ ಹಾತ್‌ನಲ್ಲಿ ನಡೆಸಲಾಯಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಂಧ್ರಪ್ರದೇಶದ ಪೊಂದೂರು ಗ್ರಾಮದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಖಾದಿ ಕುಶಲಕರ್ಮಿಗಳ ಗುಂಪು ವರ್ಕ್‌ಶೆಡ್‌ಗೆ ಶಂಕುಸ್ಥಾಪನೆ ಮಾಡಿದರು. ಹೀಗೆ ಈ ಬಾರಿಯೂ ವಿಶಿಷ್ಟವಾಗಿ ದೇಶದಾದ್ಯಂತ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7ರಂದು ಆಚರಿಸಲಾಗುತ್ತಿದೆ.


Share news

Related Articles

Leave a Reply

Your email address will not be published. Required fields are marked *

Back to top button