ರಾಷ್ಟ್ರೀಯ
Trending

ನಿವೃತ್ತ ಯೋಧರ ಪಿಂಚಣಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

Share news

ಕೇಂದ್ರ ಸಚಿವ ಸಂಪುಟ ಅತ್ಯಂತ ಮಹತ್ವ ಪೂರ್ಣವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಸಶಸ್ತ್ರ ಪಡೆಗಳ ನಿವೃತ್ತ ಯೋಧರಿಗೆ ಪಿಂಚಣಿ ನೀಡುವ ‘ಒಂದು ಶ್ರೇಣಿ, ಒಂದು ಪಿಂಚಣಿ’ (Revision Of OROP) ವ್ಯವಸ್ಥೆಯ ಪರಿಷ್ಕರಣೆಗೆ ಮುಂದಾಗಿದ್ದು,ಈ ಮೂಲಕ ಲಕ್ಷಾಂತರ ಯೋಧರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ.

ಕೇಂದ್ರ ಸರ್ಕಾರ 2015ರಲ್ಲಿ ಒಆರ್‌ಒಪಿ ಯೋಜನೆ ಜಾರಿಗೆ ತಂದಿದೆ. ಪರಿಷ್ಕೃತ ಪಿಂಚಣಿಯು 2019ರ ಜುಲೈನಿಂದ 2022ರ ಜೂನ್‌ವರೆಗಿನ ಬಾಕಿಯನ್ನೂ (Arrears) ಒಳಗೊಂಡಿದೆ. ಬಾಕಿ ಸೇರಿ ಪಿಂಚಣಿ ನೀಡಲು ಕೇಂದ್ರ ಸರ್ಕಾರವು 23,638 ಕೋಟಿ ರೂ. ವ್ಯಯಿಸಲಿದೆ. ಯೋಜನೆಯ ಪರಿಷ್ಕರಣೆಯಿಂದ ವಾರ್ಷಿಕ 8,450 ಕೋಟಿ ರೂ. ಖರ್ಚಾಗಲಿದೆ ಹಾಗೂ 25.13 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದರು.


Share news

Related Articles

Leave a Reply

Your email address will not be published. Required fields are marked *

Back to top button