ರಾಷ್ಟ್ರೀಯ
Trending

ಜಮ್ಮು –ಕಾಶ್ಮೀರದ ಗಡಿಯಲ್ಲಿರುವ ಜನರಿಗೆ ಶಸ್ತ್ರಾಸ್ತ್ರ ತರಬೇತಿ

Share news

ಶ್ರೀನಗರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರದ ಎಲ್ಒಸಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿನ ಜನರಿಗೆ ಸಶಸ್ತ್ರ ತರಬೇತಿ ನೀಡಲು ಸೂಚಿಸಿದ್ದಾರೆ.ಹಾಗೂ ಇದರ ಜೊತೆಗೆ ಗ್ರಾಮ ರಕ್ಷಣಾ ಸಮಿತಿಗಳನ್ನು ಮತ್ತೆ ಪುನರ್ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

1995ರಿಂದ ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ಹಾವಳಿ ಆರಂಭವಾದ ಬಳಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ನಾಗರಿಕರ ಸಂಖ್ಯೆ 30 ಸಾವಿರ ದಾಟಿದೆ. ಸಿಆರ್ಸಿಎಫ್ನ್ ಯೋಧರು ಮತ್ತು ಅಧಿಕಾರಿಗಳು ಜಮ್ಮುವಿನ ಸುಂದರ್ ಬನಿ ಎಂಬಲ್ಲಿ ಸ್ಥಳೀಯರಿಗೆ ರೈಫಲ್ ಬಳಕೆ ಮತ್ತು ಗುಂಡು ಹಾರಿಸುವುದರ ಬಗ್ಗೆ ತರಬೇತಿ ನೀಡಲು ಆರಂಭಿಸಿದ್ದಾರೆ. ಈ ಸ್ಥಳ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯ ಪ್ರಕಾರ, 2022ರ ಡಿಸೆಂಬರ್ ನಿಂದಲೇ ಜಮ್ಮು, ಪೂಂಛ್, ರಜೌರಿ, ಸಾಂಬಾ, ದೋಡಾ, ಕಿಶ್ವರ್ ಗಳಲ್ಲಿ ತರಬೇತಿ ನೀಡಲು ಆರಂಭಿಸಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button