ರಾಷ್ಟ್ರೀಯ

ಮುಂದಿನ 6 ತಿಂಗಳಲ್ಲಿ ಕೇಂದ್ರ ಸರ್ಕಾರ ಇ-ಪಾಸ್‌ಪೋರ್ಟ್ ಪ್ರಾರಂಭಿಸಲಿದೆ

Share news

ಭಾರತ ಸರ್ಕಾರ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಎಲೆಕ್ಟ್ರಾನಿಕ್-ಪಾಸ್‌ಪೋರ್ಟ್‌ ಗಳನ್ನು ಪ್ರಾರಂಭಿಸಲಿದೆ. ಪಾಸ್‌ಪೋರ್ಟ್ ಪುಸ್ತಕಕ್ಕೆ ಇ-ಚಿಪ್ ಮತ್ತು ಇನ್ನೂ ಕೆಲವು ವೈಶಿಷ್ಟ್ಯಗಳನ್ನು ಸೇರಿಸಲಾಗುವುದು, ಇದು ಭಾರತೀಯ ಪಾಸ್‌ಪೋರ್ಟ್‌ನ ಭದ್ರತಾ ನವೀಕರಣವನ್ನು ಒದಗಿಸುತ್ತದೆ ಮತ್ತು ಯಂತ್ರ ಓದುವಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಡಾ. ಔಸಫ್ ಸಯೀದ್ ಅವರು ಹೈದರಾಬಾದ್‌ನಲ್ಲಿ ಮಾಹಿತಿ ನೀಡಿದ್ದಾರೆ.

ವಿದೇಶ್ ಸಂಪರ್ಕ್ ಔಟ್‌ರೀಚ್ ಕಾರ್ಯಕ್ರಮದ ಭಾಗವಾಗಿ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳ ತಂಡ ಹೈದರಾಬಾದ್‌ಗೆ ಭೇಟಿ ನೀಡಿದ್ದು, ತೆಲಂಗಾಣ ಸರ್ಕಾರದೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ. ವಲಸಿಗರ ಹಿತಾಸಕ್ತಿ ಮುಖ್ಯವಾಗಿದ್ದು, ಇತರ ದೇಶಗಳಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಿರುವ ಭಾರತೀಯ ನಾಗರಿಕರಿಗೆ ಅನುಕೂಲವಾಗುವಂತೆ ಮತ್ತು ಕಾನೂನು ಬೆಂಬಲವನ್ನು ಒದಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

ಕೇಂದ್ರವು ಕಾನೂನು ಪ್ರಕ್ರಿಯೆಗಳ ಮೂಲಕ ವಲಸೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ವಲಸಿಗರ ತರಬೇತಿ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಏಜೆಂಟ್‌ಗಳನ್ನು ನಿರ್ಮೂಲನೆ ಮಾಡಲಾಗುವುದು ಎಂದು ಡಾ. ಸಯೀದ್ ಹೇಳಿದರು.

ತೆಲಂಗಾಣದಲ್ಲಿ ಗರಿಷ್ಠ ಸಂಖ್ಯೆಯ ವಲಸೆ ಅನುಮತಿಗಳನ್ನು ನೀಡಲಾಗುತ್ತಿದೆ ಎಂದು ವಲಸೆ ಪ್ರಕ್ರಿಯೆಗಳನ್ನು ಉಲ್ಲೇಖಿಸಿದ ಸಯೀದ್ ಅವರು, 12 ದೇಶಗಳೊಂದಿಗಿನ ಒಪ್ಪಂದವು ಪ್ರಸ್ತುತ ಜಾರಿಯಲ್ಲಿರುವಾಗ ವಲಸೆ ಮತ್ತು ಮೊಬಿಲಿಟಿ ಒಪ್ಪಂದಗಳನ್ನು ಇನ್ನೂ ವಿಸ್ತರಿಸಲು 15 ದೇಶಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು. ವಲಸಿಗರ ಕಾನೂನು ರಕ್ಷಣೆಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಯತ್ನಗಳ ಭಾಗವಾಗಿ ನಾಳೆ ನೇಮಕಾತಿ ಏಜೆಂಟರೊಂದಿಗೆ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.

ಈ ವರ್ಷ ಹೈದರಾಬಾದ್ ಪಾಸ್‌ಪೋರ್ಟ್ ಕಚೇರಿಯ ಮೂಲಕ 4.28 ಲಕ್ಷ ಪಾಸ್‌ಪೋರ್ಟ್‌ಗಳನ್ನು ನೀಡಿದ್ದು,16 ಸಾವಿರಕ್ಕೂ ಹೆಚ್ಚು ಇತರ ಸೇವೆಗಳನ್ನು ವಿಸ್ತರಿಸಲಾಗಿದೆ ಎಂದು ಮುಖ್ಯ ಪಾಸ್‌ಪೋರ್ಟ್ ಅಧಿಕಾರಿ ಟಿ ಆರ್ಮ್‌ಸ್ಟ್ರಾಂಗ್ ಚಾಂಗ್ಸನ್ ಮಾಹಿತಿ ನೀಡಿದ್ದಾರೆ. ಇ- ಪಾಸ್ ಪೋರ್ಟ್ ಮೂಲಕ ವಲಸೆಗಾರರಿಗೆ ಅವರ ಭದ್ರತೆಯ ದೃಷ್ಟಿಯಿಂದ ಇನ್ನಷ್ಟು ಸಹಾಯವಾಗಲಿದೆ.


Share news

Related Articles

Leave a Reply

Your email address will not be published. Required fields are marked *

Back to top button