ಆರೋಗ್ಯರಾಷ್ಟ್ರೀಯಲೇಖನ ಸಂಗಮ
Trending

ಕೇವಲ 20 ರೂಪಾಯಿಗೆ ಚಿಕಿತ್ಸೆ ನೀಡುವ ವೈದ್ಯ ಡಾ.ಮುನಿಶ್ವರ್ ಚಂದರ್ ದವರ್

Share news

ಮಧ್ಯಪ್ರದೇಶ ಮೂಲದ 77 ವರ್ಷದ ಡಾ.ಮುನಿಶ್ವರ್ ಚಂದರ್ ದವರ್ ವೈದ್ಯರಾಗಿ ರೋಗಿಗಳಿಗೆ ಸ್ಫರ್ತಿಯ ಚಿಲುಮೆ ಆಗಿ ತಮ್ಮ ಕ್ಲಿನಿಕ್​ಗೆ ಬರುವ ಪ್ರತಿ ರೋಗಿಗೂ ಕೇವಲ 20 ರೂಪಾಯಿ ಮಾತ್ರ ಸರ್ವೀಸ್ ಚಾರ್ಜ್​ ಪಡೆಯುತ್ತಿದ್ದಾರೆ. ಪ್ರತಿದಿನ ಸುಮಾರು 200 ರೋಗಿಗಳ ಆರೋಗ್ಯವನ್ನು ತಪಾಸಣೆ ನಡೆಸುತ್ತಾರೆ. ಡಾ.ದವರ್ ಹುಟ್ಟಿದ್ದು ಪಾಕಿಸ್ತಾನದ ಪಂಜಾಬ್​ನಲ್ಲಿ. ಜನವರಿ 16, 1946ರಲ್ಲಿ ಜನಿಸಿದ್ದ ಇವರು ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದ ಮೇಲೆ ಇವರ ಕುಟುಂಬ ಭಾರತಕ್ಕೆ ವಲಸೆ ಬಂದಿತ್ತು. ಆರಂಭಿಕ ಶಿಕ್ಷಣವನ್ನು ಭಾರತದಲ್ಲೇ ಪಡೆದ ಡಾ. ದವರ್, 1967ರಲ್ಲಿ ಎಂಬಿಬಿಎಸ್​ ಪದವಿಯನ್ನು ಜಬಲ್​ಪುರದಲ್ಲಿ ಪಡೆದುಕೊಂಡರು.

ವೈದ್ಯರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೇ ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿ ಅತ್ಯುತ್ತಮ ದೇಶ ಸೇವಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ‘ಇಂಡೋ-ಪಾಕ್ ಯುದ್ಧ’ದ ಸಂದರ್ಭದಲ್ಲಿ ಡಾ.ದವರ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 1972ರ ಬಳಿಕ ಇವರು ನಾಗರಿಕರ ಆರೋಗ್ಯ ಸೇವೆಗಾಗಿ ಜಬಲ್​ಪುರದಲ್ಲಿ ‘ಹೆಲ್ತ್​ ಕೇರ್ ಸೆಂಟರ್’​ ತೆರೆದರು. ಆರಂಭದಲ್ಲಿ ಪ್ರತಿ ರೋಗಿಯಿಂದ ಕೇವಲ 2 ರೂಪಾಯಿ ಮಾತ್ರ ಪಡೆಯುತ್ತಿದ್ದರಂತೆ. ಬದಲಾದ ಪರಿಸ್ಥಿತಿಯಲ್ಲಿ ಈಗ 20 ರೂಪಾಯಿ ಪಡೆಯುತ್ತಿದ್ದಾರೆ.

ನಾನು ಇಷ್ಟು ಕಡಿಮೆ ಹಣವನ್ನು ಪಡೆಯುವ ಬಗ್ಗೆ ಮನೆಯಲ್ಲಿ ಚರ್ಚೆ ಆಗಿದೆ. ಆದರೆ ನನ್ನ ಈ ಜನಸೇವೆಗೆ ಮನೆಯಲ್ಲಿ ಯಾರದ್ದೂ ತಕರಾರು ಇರಲಿಲ್ಲ. ಇಂದಿಗೂ ಕೂಡ. ಜನಸೇವೆ ಮಾಡುವುದೊಂದೇ ನಮ್ಮ ಗುರಿ, ಹಾಗಾಗಿ ಶುಲ್ಕ ಹೆಚ್ಚಿಸಿಲ್ಲ ಎಂಬ ಅವರ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ

ಮುನಿಶ್ವರ್ ಚಂದರ್ ದವರ್ ಅವರ ಸಮಾಜ ಸೇವೆ ಹಾಗೂ ಕಠಿಣ ಪರಿಶ್ರಮದಿಂದ ಇಂದು ಪದ್ಮಶ್ರೀ ಪ್ರಶಸ್ತಿ ಮೂಲಕ ದೇಶವೇ ಗುರುತಿಸುವಂತೆ ಮಾಡಿದೆ. ಅವರ ದೇಶಸೇವೆ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಔಷಧಿ ನೀಡುವ ಕೆಲಸ ಲಕ್ಷಾಂತರ ಹಣ ಕೇಳುವ ಇಂದಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button