ರಾಷ್ಟ್ರೀಯ

ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರಿಸಿದ ದ್ರೌಪದಿ ಮುರ್ಮು

Share news

ಭಾರತಕ್ಕೆ ಇಂದು ಐತಿಹಾಸಿಕ ದಿನ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆ ಹಾಗೂ ಕಿರಿಯ ವಯಸ್ಸಿನ ರಾಷ್ಟ್ರಪತಿಯಾಗಿ ಅಧಿಕಾರವನ್ನು ದ್ರೌಪದಿ ಮುರ್ಮು ಸ್ವೀಕರಿಸಿರುವುದು ನಿಜಕ್ಕೂ ಸಂಭ್ರಮದ ಕ್ಷಣ

ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಬುಡುಕಟ್ಟು ಜನಾಂಗದಲ್ಲಿ ಜನಿಸಿದ ಸಾಮಾನ್ಯ ಮಹಿಳೆ ಸಾಧನೆಯ ಹೆಜ್ಜೆಗಳನ್ನು ಇಡುತ್ತಾ ಅಧ್ಯಾಪಕರಾಗಿ, ಶಾಸಕರಾಗಿ, ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ಇಂದು ಭಾರತ ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ದ್ರೌಪದಿ ಮುರ್ಮು ಅವರ ಸರಳತೆಯ ಬದುಕಿನೊಂದಿಗೆ ಸಾಧನೆಯ ಛಲವು ದೇಶಕ್ಕೆ ಸ್ಪೂರ್ತಿ. ಇಂತಹ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿರುವುದು ಸೌಭಾಗ್ಯದ ಸಂಗತಿ.


Share news

Related Articles

Leave a Reply

Your email address will not be published. Required fields are marked *

Back to top button