ರಾಷ್ಟ್ರೀಯ

ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಶಕ್ತಿ ತುಂಬುವ ಉಚಿತ ಹೋಲಿಗೆ ಯಂತ್ರ ಯೋಜನೆ

Share news

ಮಹಿಳೆಯರು ಉದ್ಯೋಗವನ್ನು ತಾವೇ ಸ್ವತಃ ಸೃಷ್ಟಿಸಿಕೊಳ್ಳಲು ಸಹಾಯವಾಗುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಚಾಲನೆ ನೀಡಿದ್ದಾರೆ. ದೇಶದ ದುರ್ಬಲ ವರ್ಗ ಮತ್ತು ಕಾರ್ಮಿಕ ಮಹಿಳೆಯರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದ್ದು, ದೇಶದ ಮಹಿಳೆಯರು ಸ್ವತಃ ಸಂಪಾದಿಸಲು ಮತ್ತು ಸ್ವಾವಲಂಬಿಯಾಗಿ ಬದುಕು ನಡೆಸಲು ಈ ಯೋಜನೆ ಅವಕಾಶ ಕಲ್ಪಿಸಿದೆ.

ಕೇಂದ್ರ ಸರ್ಕಾರ ಅನೇಕ ಉದ್ಯೋಗ ಸಂಬಂಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಉಚಿತ ಹೋಲಿಗೆ ಯಂತ್ರ ಯೋಜನೆಯು ಒಂದಾಗಿದೆ. ರಾಜ್ಯದ 20 ರಿಂದ 40 ವಯಸ್ಸಿನ 50,000 ಮಹಿಳೆಯರು ಹೋಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಬಡವ ಮತ್ತು ಕೂಲಿ ಕಾರ್ಮಿಕ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದ್ದು, ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಚಾಲನೆಯಲ್ಲಿದೆ. ಉಚಿತ ಹೊಲಿಗೆ ಯಂತ್ರ ಯೋಜನೆ 2022 ಆನ್‌ಲೈನ್‌ ಮೂಲಕ www.india.gov.in ಗೆ ಭೇಟಿ ನೀಡಿ (PM Muft Silai Machine Yojana ) ನೋಂದಣಿ ಮಾಡಿಕೊಂಡು ಅಗತ್ಯವಿರುವ ಅರ್ಹತೆ ಮತ್ತು ದಾಖಲೆಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪಡೆಯಬಹುದು.ಮಹಿಳೆಯರು ತಾವು ಸ್ವಾವಲಂಬಿ ಜೀವನ ನಡೆಸಲು ಇದೊಂದು ಉತ್ತಮ ಯೋಜನೆಯಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button