ರಾಷ್ಟ್ರೀಯ

ಅಂಚೆ ಮೂಲಕ ರಾಷ್ಟ್ರಧ್ವಜವನ್ನು ಹೇಗೆ ಪಡೆಯಬಹುದು ?

Share news

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯ ಭಾಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗ ಅಭಿಯಾನದಲ್ಲಿ ದೇಶದಾದ್ಯಂತ ಜನರು ಭಾಗವಾಹಿಸಲು ಹಲವು ರೀತಿಯಲ್ಲಿ ರಾಷ್ಟ್ರಧ್ವಜವನ್ನು ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ.

ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಭಾರತೀಯ ಅಂಚೆ ಇಲಾಖೆ ಮೂಲಕ ಧ್ವಜವನ್ನು ಮನೆಗೆ ತರಿಸಿಕೊಳ್ಳಬಹುದು. ತಂದು ಕೊಡಲು ಯಾವುದೇ ಶುಲ್ಕ ಪಡೆಯದೇ ಹಾಗೂ ಜಿಎಸ್ ಟಿ ಶುಲ್ಕವು ವಿಧಿಸದೆ ಉಚಿತವಾಗಿ ಮನೆಗಳಿಗೆ ಧ್ವಜವನ್ನು ಅಂಚೆ ಇಲಾಖೆ ತಲುಪಿಸುತ್ತದೆ.

https://www.epostoffice.gov.in/

ಈ ಮೇಲಿನ ಲಿಂಕ್ ಒತ್ತಿ ಇ-ಪೋಸ್ಟ್ ಮೂಲಕ 25 ರೂ. ಪಾವತಿಸಿದರೆ ಸಾಕು ಕೊಟ್ಟಿರುವ ವಿಳಾಸಕ್ಕೆ ರಾಷ್ಟ್ರಧ್ವಜ ಬಂದು ತಲುಪಲಿದೆ. ಆಗಸ್ಟ್​ 12ರ ಮಧ್ಯರಾತ್ರಿ 12 ಗಂಟೆಯವರೆಗೂ ಬುಕಿಂಗ್​ಗೆ ಅವಕಾಶ ಇರಲಿದೆ. ಎಲ್ಲಾ ಊರುಗಳಲ್ಲೂ ದೇಶಾದ್ಯಂತ ಈ ಸೌಲಭ್ಯವನ್ನು ಒದಗಿಸಲಾಗಿದೆ. ರಾಷ್ಟ್ರಧ್ವಜ ಖರೀದಿಸಿ ಹರ್ ಘರ್ ತಿರಂಗ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.


Share news

Related Articles

Leave a Reply

Your email address will not be published. Required fields are marked *

Back to top button