ರಾಷ್ಟ್ರೀಯ

ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನೆಯನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ ಭಾರತ

Share news

ಭಾರತೀಯ ಸೇನೆಯ ಅವಶ್ಯಕತೆಗಳನ್ನು ಸರಿಯಾದ ರೀತಿಯಲ್ಲಿ ಪೂರೈಸಲು ನರೇಂದ್ರ ಮೋದಿ ಸರ್ಕಾರವು ಪ್ರಮುಖ ನಿರ್ಧಾರ ಕೈಗೊಂಡಿದ್ದು, ಖಾಸಗಿ ವಲಯಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುಕ್ತಗೊಳಿಸಲಿದೆ. ರಕ್ಷಣಾ ಸ್ವಾಧೀನ ಪ್ರಕ್ರಿಯೆ (ಡಿಎಪಿ) ಗೆ ಮುಂದಿನ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ.

ಭಾರತೀಯ ರಕ್ಷಣಾ ವಲಯಕ್ಕೆ ಮತ್ತಷ್ಟು ಬಲ ನೀಡಲು ಹಾಗೂ ಸರಿಯಾದ ಸಮಯಕ್ಕೆ ಶಸ್ತ್ರಾಸ್ತ್ರ ಪೂರೈಸಲು ಈ ತಿದ್ದುಪಡಿಯು ಭಾರತದ ಖಾಸಗಿ ವಲಯಕ್ಕೆ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿ ಕಂಪನಿಗಳು ಪಾಲನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಸ್ವದೇಶಿ ಶಸ್ತ್ರಾಸ್ತ್ರಗಳ ತಯಾರಿಯೊಂದಿಗೆ ಸೃದೃಡ ಭಾರತದ ನಿರ್ಮಾಣಕ್ಕೆ ತಿದ್ದುಪಡಿಯು ಅಡಿಪಾಯವಾಗಲಿದೆ. ರಕ್ಷಣಾ ವಲಯದಲ್ಲಿ ಹೊಸ ಹೊಸ ಆವಿಷ್ಕಾರ ಹಾಗೂ ಸಂಶೋಧನೆಗೆ ಮುನ್ನುಡಿ ಬರೆಯಲಿದೆ.

ಖಾಸಗಿ ವಲಯಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಆರ್-ಡಿ) ಮುಕ್ತಗೊಳಿಸುವುದರಿಂದ ಖಾಸಗಿ ಕಂಪನಿಗಳು ಸೇನಾ ಹೆಲಿಕಾಪ್ಟರ್‌ಗಳು, ವಿಮಾನಗಳು ಮತ್ತು ಸುಧಾರಿತ ಜಲಾಂತರ್ಗಾಮಿಗಳು, ಡ್ರೋನ್ ಗಳು ಇವುಗಳ ಅಭಿವೃದ್ಧಿ ಮತ್ತು ಹೊಸ ಸಂಶೋಧನೆಗಳಿಗೆ ನಾಂದಿಯಾಗಲಿದೆ. ಖಾಸಗಿ ಕಂಪನಿಗಳು ಭಾರತದ ರಕ್ಷಣಾ ರಂಗದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.

ರಕ್ಷಣಾ ವಲಯದ ಅಭಿವೃದ್ಧಿ ಮತ್ತು ಸಂಶೋಧನೆಯ ಅಡಿಯಲ್ಲಿ ಸರ್ಕಾರಿ ಡಿಪಿಯುಎಸ್‌ಗಳು ಮತ್ತು ಪ್ರಯೋಗಾಲಯಗಳಿಗೆ ಮಾತ್ರ ಈವರೆಗೆ ಅನುಮತಿ ನೀಡಲಾಗಿತ್ತು ಆದರೆ ಇದೀಗ ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರ ಅಭಿವೃದ್ಧಿ ವಲಯದಲ್ಲೂ ಖಾಸಗಿ ಕಂಪನಿಗಳಿಗೆ ಪಾಲು ಪಡೆಯಲು ಅವಕಾಶ ಕಲ್ಪಿಸಿದ್ದು, ಇದೊಂದು ಮಹತ್ವಪೂರ್ಣ ನಿರ್ಧಾರವಾಗಿದೆ. ಭಾರತದ ಸೆನೆಗೆ ಇನ್ನಷ್ಟು ಸಹಾಯವಾಗಲಿದೆ.


Share news

Related Articles

Leave a Reply

Your email address will not be published. Required fields are marked *

Back to top button