ರಾಷ್ಟ್ರೀಯ

ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಚಾಲನೆ

Share news

ದೇಶದ ಮೊದಲ ಹವಾನಿಯಂತ್ರಿತ ಡಬಲ್ ಡೆಕ್ಕರ್ ಬಸ್ ಸೇರಿದಂತೆ ಎರಡು ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಮುಂಬೈನಲ್ಲಿ ಕೇಂದ್ರ ರಸ್ತೆ, ಸಾರಿಗೆ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ. ಮುಂದೆ 900 ಎಲೆಕ್ಟ್ರಿಕ್ ಬಸ್ಸುಗಳ ಪೂರೈಕೆಗೆ ಬೃಹತ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, 50 ಶೇಕಡಾ ಬಸ್ಸುಗಳು ಮಾರ್ಚ್ 2023ರೊಳಗೆ ಸಂಚಾರ ಪ್ರಾರಂಭಿಸಲಿದೆ.

ದೀರ್ಘಾವಧಿಯ ಆಲೋಚನೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸುವ ಅವಶ್ಯಕತೆ ಇದೆ ಮತ್ತು ನಗರ ಸಾರಿಗೆಯನ್ನು ಸುಧಾರಿಸುವತ್ತ ಗಮನ ನೀಡಿ, ಹೆಚ್ಚಿನ ಪ್ರಯಾಣಿಕರ ಸಾಂದ್ರತೆಯ ಎಲೆಕ್ಟ್ರಿಕ್ ಸಾರಿಗೆ ಪರಿಸರ ವ್ಯವಸ್ಥೆ ನಿರ್ಮಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಹಾಗೂ ಗ್ರೀನ್ ಸೆಲ್ಯೂಷನ್ ಗೆ ಹೆಚ್ಚುತ್ತಿರುವ ಬೇಡಿಕೆಗೆ ಎಲೆಕ್ಟ್ರಿಕ್ ವಾಹನ ಅಳವಡಿಕೆ ದೃಷ್ಟಿಯಿಂದ ಸರ್ಕಾರ ಹಾಗೂ ನೀತಿಗಳು ಗ್ರಾಹಕರಿಗೆ ಬೆಂಬಲ ನೀಡಲಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ತಿಳಿಸಿದ್ದಾರೆ.

More To Read :https://bharathavani.com/news/


Share news

Related Articles

Leave a Reply

Your email address will not be published. Required fields are marked *

Back to top button