ರಾಷ್ಟ್ರೀಯ

ಶೇ.13.5% ರಷ್ಟು ವೇಗವಾಗಿ ಬೆಳವಣಿಗೆ ಕಂಡ ಭಾರತದ ಜಿಡಿಪಿ

Share news

ಜಗತ್ತಿನ ಪ್ರಮುಖ ದೇಶಗಳ ಆರ್ಥಿಕ ಪರಿಸ್ಥಿತಿಯು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಚೀನಾದ ಆರ್ಥಿಕತೆಯು ಮಂದಗತಿಯತ್ತ ಸಾಗುತ್ತಿರುವಾಗ, ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಅಂಕಿ ಅಂಶಗಳ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಭಾರತದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರ 13.5% ರಷ್ಟು ಗಣನೀಯವಾಗಿ ಏರಿಕೆಯಾಗಿದೆ. ಏಪ್ರಿಲ್‌- ಜೂನ್‌ ಮೊದಲ ಹಣಕಾಸು ವರ್ಷದಲ್ಲಿ ಆರ್‌ಬಿಐ ಜಿಡಿಪಿ ಬೆಳವಣಿಗೆ 16.2% ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು. ಚೀನಾವು ಕೇವಲ 0.4 ರಷ್ಟು ಜಿಡಿಪಿ ದಾಖಲಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಖಾಸಗಿ ಅಂತಿಮ ಬಳಕೆಯ ವೆಚ್ಚವು (PFCE) ₹22 ಲಕ್ಷ ಕೋಟಿಯಷ್ಟಿದೆ, ಇದು 2019-20 ರಲ್ಲಿನ ಸಾಂಕ್ರಾಮಿಕ ಪೂರ್ವದ ವೆಚ್ಚ ₹20 ಲಕ್ಷ ಕೋಟಿಗೆ ಹೋಲಿಸಿದರೆ 10% ಹೆಚ್ಚಳವಾಗಿದೆ. ಇದು ನಿರಂತರ ಹೆಚ್ಚಳವನ್ನು ಸೂಚಿಸುತ್ತದೆ ಮತ್ತು ಸಾಂಕ್ರಾಮಿಕ ಅಡೆತಡೆಗಳ ಹೊರತಾಗಿಯೂ ಗಣನೀಯ ಏರಿಕೆಯು ಭಾರತದ ಆರ್ಥಿಕ ಸದೃಢವನ್ನು ತೋರಿಸುತ್ತಿದೆ.

ಮೂಲಸೌಕರ್ಯ ಕಾರ್ಖಾನೆಗಳ ಉತ್ಪಾದನೆಯು ಜುಲೈನಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 4.5 ವಿಸ್ತರಣೆ ಕಂಡಿದೆ. ಯಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ – ಹೀಗೆ 8 ಮೂಲಸೌಕರ್ಯ ವಲಯಗಳ ಉತ್ಪಾದನಾ ಬೆಳವಣಿಗೆಯು ಈ ಹಣಕಾಸು ವರ್ಷದ ಏಪ್ರಿಲ್-ಜುಲೈನಲ್ಲಿ ಶೇಕಡಾ 11.5 ರಷ್ಟಿದೆ. ಇತರ ಪ್ರಮುಖ ದೇಶಗಳ ಆರ್ಥಿಕತೆಗಳಿಗೆ ಹೋಲಿಸಿದರೆ ಹಣದುಬ್ಬರದ ಕನಿಷ್ಠ ಪ್ರಭಾವದೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂಬುದು ಸರ್ಕಾರದ ವಿವೇಕಯುತ ಆರ್ಥಿಕ ನೀತಿಯ ಫಲಿತಾಂಶವಾಗಿದೆ.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಪ್ರಕಾರ ಪ್ರಮುಖ ಆರ್ಥಿಕತೆಗಳ ತ್ರೈಮಾಸಿಕ GDP ಡೇಟಾಬೇಸ್ ಏಪ್ರಿಲ್-ಜೂನ್, 2022 ರ ಬೆಳವಣಿಗೆಯ ಮುನ್ಸೂಚನೆಯ ಪ್ರಕಾರ ಚೀನಾಕ್ಕೆ 0.4%, ಜರ್ಮನಿ (1.7%), US (1.7%), ಫ್ರಾನ್ಸ್ ( 4.2%), ಇಟಲಿ (4.6%), ಕೆನಡಾ (4.8%). ಚೀನಾದಲ್ಲಿ ಆರ್ಥಿಕ ಮಂದಗತಿಯು ಬ್ಯಾಂಕಿಂಗ್ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಗಂಭೀರ ತೊಂದರೆಯೊಂದಿಗೆ ಕೋವಿಡ್ ಲಾಕ್‌ಡೌನ್‌ಗಳ ಪರಿಣಾಮ ಬೀರಿದೆ. ಶ್ರೀಲಂಕಾ, ಪಾಕಿಸ್ತಾನ, ಮ್ಯಾನ್ಮಾರ್ ಮತ್ತು ಕೀನ್ಯಾದಂತಹ ದಿವಾಳಿತನವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತ ಜಾಗತಿಕವಾಗಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.


Share news

Related Articles

Leave a Reply

Your email address will not be published. Required fields are marked *

Back to top button